ಬೆಂಗಳೂರು : ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಮಂಡಿ ನೋವು ಸಮಸ್ಯೆ ಕಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಅವರು ಸರ್ಕಾರದ ಯಾವುದೇ ಕಾರ್ಯಕ್ರಮಕ್ಕೆ ಬರುವಾಗಲೂ ಕೂಡ ಚೇರ್ ನಲ್ಲಿಯೇ ಆಗಮಿಸುತ್ತಿದ್ದಾರೆ ಇದೇ ವಿಚಾರವಾಗಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಮಂಡಿ ನೋವಿನ ಕುರಿತು ಲೇವಡಿ ಮಾಡಿದ್ದು, ನಮ್ಮ ಜನಕ್ಕೆ ಅನ್ಯಾಯ ಮಾಡಿದ್ದಕ್ಕೆ ಇಂದು ಕುಂಟುತ್ತಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ.
ಎಸಿಪಿ ಹಾಗೂ ಟಿಎಸ್‌ಪಿ ಹಣವನ್ನು ಗ್ಯಾರೆಂಟಿಗಳಿಗೆ ಬಳಸುವದನ್ನು ಖಂಡಿಸಿ ಇಂದು ಬಿಜೆಪಿ ಪ್ರತಿಭಟನೆ ನಡೆಸಿತು. ಈ ವೇಳೆ ಭಾಷಣದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿ ನೋವಿನ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ. ಸಿಎಂ ಮಂಡಿ ನೋವು ಉಲ್ಲೇಖಿಸಿದ ಛಲವಾದಿ ನಾರಾಯಣಸ್ವಾಮಿ ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.
ಭಾಷಣದ ಆರಂಭದಲ್ಲಿ ನಮ್ಮ ಜನರಿಗೆ ಅನ್ಯಾಯ ಮಾಡಿದ್ದಕ್ಕೆ ಕುಂಟುತ್ತಿದ್ದೀರಿ. ನಮ್ಮವರ ಹಣ ದುರುಪಯೋಗ ಮಾಡಿದ್ದಕ್ಕೆ ನೀವು ಈಗ ವೀಲ್ ಚೇರ್ ನಲ್ಲಿ ಬರುತ್ತಿರುವುದು 25,000 ಕೋಟಿ ದಲಿತರ ಹಣ ದುರ್ಬಳಕೆ ಆಗಿದೆ. ಈಗ ವೀಲ್ ಚೇರ್ ನಲ್ಲಿ ಬರುತ್ತಿದ್ದೀರಿ ಮುಂದೆ ಯಾವ ಚೇರ್ ಬರುತ್ತೋ ಗೊತ್ತಿಲ್ಲ ಎಂದು ಭಾಷಣದ ವೇಳೆ ಚಲವಾದಿ ನಾರಾಯಣಸ್ವಾಮಿ ನಾಲಿಗೆ ಹರಿಬಿಟ್ಟಿದ್ದಾರೆ.