ಮಂಡ್ಯ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ಪ್ರಾಜಿಕ್ಯೂಷನ್ ಗೆ ಅನುಮತಿ ವಿಚಾರವಾಗಿ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಅದೇ ರೀತಿಯಾಗಿ ಮಂಡ್ಯ ಜಿಲ್ಲೆಯಲ್ಲಿ ಮಳವಳ್ಳಿಯ ಕಾಂಗ್ರೆಸ್ ಶಾಸಕ ಪಿ.ಎಂ ನರೇಂದ್ರಸ್ವಾಮಿ ರಾಜ್ಯಪಾಲರ ವಿರುದ್ಧ ನಾಲಿಗೆ ಹರಿ ಪಟ್ಟಿದ್ದು ನೀನು ರಾಜ್ಯಪಾಲ ಆಗೋಕೆ ನಾಲಾಯಕ್ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಪ್ರತಿಭಟನೆ ವೇಳೆ ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಿ.ಎಂ ನರೇಂದ್ರಸ್ವಾಮಿ ನಾಲಿಗೆ ಹರಿಬಿಟ್ಟಿದ್ದು, ರಾಜ್ಯಪಾಲ ಆಗೋಕೆ ನೀನು ನಾಲಾಯಕ್ ಎಂದು ನರೇಂದ್ರಸ್ವಾಮಿ ಹೇಳಿಕೆ ನೀಡಿದ್ದಾರೆ. ರಾಜ್ಯಪಾಲರ ವಿರುದ್ಧ ಅಸಂಬದ್ಧ ಪದ ಬಳಸಿದ್ದಾರೆ.
ಎಚ್ಡಿಕೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸೋಕೆ ಲೋಕಾಯುಕ್ತ ಕೇಳಿದ್ದಾರೆ. ಆದರೆ ಎಂಟು ತಿಂಗಳಿಂದ ಈ ಬಗ್ಗೆ ಕ್ರಮ ಕೈಗೊಳ್ಳದೆ ಕೂತಿದಿಯಲ್ಲಪ್ಪ? ಮಹಾನ್ ಇಂಡಸ್ಟ್ರಿಯಲಿಸ್ಟ್ ನಿರಾಣಿ ವಿರುದ್ಧ 108 ಹಗರಣಗಳಿವೆ. ಶಶಿಕಲಾ ಜೊಲ್ಲೇ ವಿಚಾರದಲ್ಲಿ ಜೊಲ್ಲು ಸುರಿಸಿಕೊಂಡು ಕೂತಿದೀಯಲ್ಲಪ್ಪ? ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ನಿನಗೆ ತಾಕತ್ತಿದ್ದರೆ ಸಿದ್ದರಾಮಯ್ಯ ವಿರುದ್ಧ ಪ್ರಾಜಿಕ್ಯೂಷನ್ ಗೆ ಅನುಮತಿ ಕೊಡು. ಸುಪ್ರೀಂ ಕೋರ್ಟ್ ನಿಂದ ಟಿಜೆ ಅಬ್ರಹಾಂ ಛೀಮಾರಿ ಹಾಕಿಸಿಕೊಂಡಿದ್ದಾನೆ. ಅಯೋಗ್ಯ ಮುಠ್ಠಾಳನಅರ್ಜಿ ಕೊಡ್ತಾನೆ. ಸಿದ್ದರಾಮಯ್ಯ ತಪ್ಪು ಮಾಡಿದರೆ ಅವರ ಜೊತೆಗೆ ನಮಗೂ ಶಿಕ್ಷೆ ಕೊಡು. ಎಂದು ರಾಜ್ಯಪಾಲರ ವಿರುದ್ಧ ಶಾಸಕ ನರೇಂದ್ರ ಸ್ವಾಮಿ ನಾಲಿಗೆ ಹರಿಬಿಟ್ಟಿದ್ದಾರೆ.