ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಗೋರಖ್ಪುರ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಚಿರತೆ ಮರಿಗೆ ಹಾಲು ಕುಡಿಸಿದ್ದಾರೆ.
ಶೀಘ್ರವೇ ಮೈಸೂರಿನಲ್ಲಿ ‘ಪ್ರವಾಸೋದ್ಯಮ ಸರ್ಕಿತ್’ ಕಾರ್ಯಾರಂಭ – ಸಿಎಂ ಬೊಮ್ಮಾಯಿ
ಯೋಗಿ ಆದಿತ್ಯನಾಥ್ ಹಾಲಿನ ಬಾಟಲಿಯಲ್ಲಿ ಚಿರತೆ ಮರಿಗೆ ಹಾಲು ಕುಡಿಸುತ್ತಿರುವ ವೀಡಿಯೋವನ್ನು ಸರ್ಕಾರದ ಅಧಿಕೃತ ಖಾತೆ ಹಂಚಿಕೊಂಡಿದೆ. ಈ ವೇಳೆ ಸಂಸದ ರವಿ ಕೀಶನ್, ಪಶುವೈದ್ಯರು ಹಾಗೂ ಮೃಗಾಲಯ ಅಧಿಕಾರಿಗಳು ಭಾಗಿಯಾಗಿದ್ದರು.
ವಿಡಿಯೋದಲ್ಲಿ ಮೊದಲು ಚಿರತೆ ಮರಿ ಹಾಲು ಕುಡಿಯಲು ಹಿಂದೇಟು ಹಾಕುತ್ತದೆ. ನಂತರ ಪಶುವೈದ್ಯರು ಚಿರತೆ ಮರಿಯನ್ನು ಕರೆದುಕೊಂಡು ಯೋಗಿ ಆದಿತ್ಯನಾಥ್ ಅವರ ಬಳಿಗೆ ತರುತ್ತಾರೆ. ಅದಾದ ಬಳಿಕ ಆ ಚಿರತೆ ಮರಿಗೆ ಆಹಾರ ನೀಡಲು ಪ್ರಯತ್ನಿಸುತ್ತಾರೆ. ಈ ಸಮಯದಲ್ಲಿ ಚಿರತೆ ಮರಿ ಬಾಟಲಿಯಿಂದ ಹಾಲು ಕುಡಿಯುತ್ತದೆ.
#WATCH | Uttar Pradesh CM Yogi Adityanath visits Saheed Ashfakulah Khan Zoological Park & veterinary hospital in Gorakhpur, feeds milk to leopard cubs pic.twitter.com/O2wljxg3we
— ANI UP/Uttarakhand (@ANINewsUP) October 5, 2022
ಶಹೀದ್ ಅಶ್ಫಾಕ್ ಉಲ್ಲಾ ಖಾನ್ ಝೂಲಾಜಿಕಲ್ ಪಾರ್ಕ್ ಎಂಬ ಈ ಮೃಗಾಲಯವನ್ನು ಕಳೆದ ವರ್ಷ ಮಾರ್ಚ್ನಲ್ಲಿ ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಿದ್ದರು. ಮೃಗಾಲಯದ ಅಧಿಕೃತ ವೆಬ್ಸೈಟ್ನ ಪ್ರಕಾರ ಇದು ಪೂವಾರ್ಂಚಲ್ ಪ್ರದೇಶದಲ್ಲಿ ಮೊದಲ ಮತ್ತು ಉತ್ತರ ಪ್ರದೇಶದ ಮೂರನೇ ಪ್ರಾಣಿಶಾಸ್ತ್ರೀಯ ಉದ್ಯಾನವನವಾಗಿದೆ.