ಮೈಸೂರು: ಪ್ರಯಾಣಿಕರ ಅನುಕೂಲಕ್ಕಾಗಿ, ಯಶವಂತಪುರ ಮತ್ತು ವಾಸ್ಕೋ ಡ ಗಾಮಾ ನಡುವೆ ಪ್ರತಿನಿತ್ಯ ಸಂಚರಿಸುವ ರೈಲು ಸಂಖ್ಯೆ 17309/17310 ರೈಲುಗಳಿಗೆ ಬೀರೂರು ಮತ್ತು ಚಿಕ್ಕಜಾಜೂರು ನಿಲ್ದಾಣಗಳ ನಡುವೆ ಬರುವ ಶಿವನಿ ನಿಲ್ದಾಣದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಾಗಿದೆ.
ಈ ತಾತ್ಕಾಲಿಕ ನಿಲುಗಡೆಯ ವೇಳಾಪಟ್ಟಿ ಈ ಕೆಳಗಿನಂತಿದೆ:
ಯಶವಂತಪುರದಿಂದ ವಾಸ್ಕೋ ಡ ಗಾಮಾ ಕಡೆಗೆ ಸಾಗುವ ರೈಲು ಸಂಖ್ಯೆ 17309 (ಯಶವಂತಪುರ-ವಾಸ್ಕೋ ಡ ಗಾಮಾ ಎಕ್ಸಪ್ರೆಸ್) ಶಿವನಿ ನಿಲ್ದಾಣಕ್ಕೆ ಪ್ರತಿದಿನ ಸಾಯಂಕಾಲ 06:11ಕ್ಕೆ ಆಗಮಿಸಿ, 06:12ಕ್ಕೆ ನಿರ್ಗಮಿಸಲಿದೆ. ಅದೇ ರೀತಿ, ವಾಸ್ಕೋ ಡ ಗಾಮಾದಿಂದ ಯಶವಂತಪುರಕ್ಕೆ ಹಿಂದಿರುಗುವ ರೈಲು ಸಂಖ್ಯೆ 17310 (ವಾಸ್ಕೋ ಡ ಗಾಮಾ – ಯಶವಂತಪುರ ಎಕ್ಸಪ್ರೆಸ್) ಶಿವನಿ ನಿಲ್ದಾಣಕ್ಕೆ ಪ್ರತಿದಿನ ಬೆಳಗ್ಗೆ 08:31ಕ್ಕೆ ಆಗಮಿಸಿ, 08:32 ನಿಮಿಷಕ್ಕೆ ಹೊರಡಲಿದೆ.
ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ರಾಜ್ಯದ ‘ಗ್ರಾಮ ಪಂಚಾಯ್ತಿ’ಗಳಲ್ಲಿ ಈ ಎಲ್ಲಾ ‘ಸೇವೆ’ಗಳು ಲಭ್ಯ
BREAKING : ಬೆಂಗಳೂರಲ್ಲಿ ಸುರಂಗ ಮಾರ್ಗ ನಿರ್ಮಾಣ ವಿಚಾರ : ರಾಜ್ಯ ಸರ್ಕಾರ & ‘GBA’ ಗೆ ಹೈಕೋರ್ಟ್ ನೋಟಿಸ್ ಜಾರಿ








