ದಾವಣಗೆರೆ : ಲೋಕಸಭಾ ಚುನಾವಣೆಗೆ ದಾವಣಗೆರೆ ಕ್ಷೇತ್ರಕ್ಕೆ ಜಿಎಂ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಇದೀಗ ಅಲ್ಲಿ ದಾವಣಗೆರೆಯಲ್ಲೂ ಕೂಡ ಬಿಜೆಪಿ ಘಟಕದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಆರು ಅಶೋಕ್ 2008ರಲ್ಲಿ ಜಿಎಂ ಸಿದ್ದೇಶ್ವರ್ ಇಲ್ಲದಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ತಿಳಿಸಿದರು.
ಕಷ್ಟದ ಸಮಯದಲ್ಲಿ ನಾನು ‘ಬಿಜೆಪಿಗೆ’ ನೆರವಾಗಿದ್ದು, ಯಾವುದೇ ಕಾರಣಕ್ಕೂ ‘ಪಕ್ಷ’ ನನ್ನ ಕೈ ಬಿಡಲ್ಲ : ಡಾ.ಕೆ.ಸುಧಾಕರ್
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗ್ತಿದ್ದಾರೆ. ನಾಳೆ ದಾವಣಗೆರೆಯಲ್ಲಿ ಪರ ಹೋಗಬಾರದು ಅಂದರೆ ಬಿಜೆಪಿಯನ್ನು ಗೆಲ್ಲಿಸಿ. 2008ರಲ್ಲಿ ಯಡಿಯೂರಪ್ಪ ಸಿಎಂ ಆಗಲು ಜಿಎಂ ಸಿದ್ದೇಶ್ವರ ಕಾರಣರಾಗಿದ್ದಾರೆ ಎಂದು ಅವರು ತಿಳಿಸಿದರು.
ವಿಜಯಪುರ : 50 ಲಕ್ಷ ಕೊಡಿ ಇಲ್ಲ ಯುವಕನನ್ನು ಕೊಲೆಗೈಯಾಲಾಗುತ್ತೆ : ನವಜೋಡಿಗಳಿಗೆ ಯುವತಿಯ ತಾಯಿ ಬೆದರಿಕೆ
2008 ರಲ್ಲಿ ಬಿಜೆಪಿ ಸರ್ಕಾರ ಬರಲು 3 ಶಾಸಕರ ಅವಶ್ಯಕತೆ ಇತ್ತು, ಆ ವೇಳೆ ವೆಂಕಟನಾಯ್ಡು ಮೂರು ಶಾಸಕರು ಬೇಕೆಂದು ನನಗೆ ಆದೇಶಿಸಿದ್ರು. ಆಗ ನಾನು ಸಂಸದ ಜಿ.ಎಂ ಸಿದ್ದೇಶ್ವರಗೆ ಫೋನ್ ಮಾಡಿ ಮಾತನಾಡಿದೆ. ಇಬ್ಬರು ಪಕ್ಷೇತರ ಶಾಸಕರನ್ನು ಬಿಜೆಪಿಗೆ ತಂದು ಕೊಟ್ಟವರು ಜಿಎಂ ಸಿದ್ದೇಶ್ವರ. ಜಿ.ಎಂ ಸಿದ್ದೇಶ್ವರ ಇಲ್ಲದಿದ್ದರೆ ಬಿಎಸ್ ವೈ 2008ರಲ್ಲಿ ಸಿಎಂ ಆಗುತ್ತಿರಲಿಲ್ಲ ಎಂದು ದಾವಣಗೆರೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.