ಚಿಕ್ಕಮಗಳೂರು : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಂಗಳೂರು ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಬಿಜೆಪಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಚಿವ ಸಿ ಟಿ ರವಿ ನಡುವೆ ಶೀತಲ ಸಮರ ಏರ್ಪಟ್ಟಿದ್ದು ಇದೀಗ ಸಿಟಿ ರವಿ ಬೆಂಬಲಿತರು ಈ ಹಿಂದೆ ನಡೆಸಿದ ಶೋಭಾ ಗೋ ಬ್ಯಾಕ್ ಅಭಿಯಾನ ಇಂದಿಗೂ ಕೂಡ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಹೌದು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಶೋಭಾ ಕರಂದ್ಲಾಜೆ ಹಾಗೂ ಸಿಟಿ ರವಿ ನಡುವೆ ತೀವ್ರ ಪೈಪೋಟಿ ನಡೆದಿದೆ. ಈ ಹಿನ್ನೆಲೆಯಲ್ಲಿ ಶೋಭಾ ಗೋ ಬ್ಯಾಕ್ ಅಭಿಯಾನ ಮುಂದುವರೆದಿದ್ದು, ಸರಣಿ ಪೋಸ್ಟ್ ಮಾಡಿ ಬಿಜೆಪಿ ಕಾರ್ಯಕರ್ತರು ಗರಂ ಆಗಿದ್ದಾರೆ, ಚಿಕ್ಕಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
BREAKING:ಇಂಡೋನೇಷ್ಯಾದಲ್ಲಿ ಭೂಕುಸಿತ ಮತ್ತು ಪ್ರವಾಹ: ಕನಿಷ್ಠ 19 ಮಂದಿ ಸಾವು, 7 ಜನ ನಾಪತ್ತೆ
ಸಿಟಿ ರವಿ ಸೋಲು, ಪ್ರತಾಪ್ ಸಿಂಹಗೆ ಟಿಕೆಟ್ ಅನುಮಾನ ಇವೆಲ್ಲ ಒಂದೇ ನಾಣ್ಯದ ಎರಡು ಕಥೆಗಳು ಎಂದು ಪೋಸ್ಟ ಹಂಚಿಕೊಂಡಿದ್ದಾರೆ.ಶೋಭಾ ಗೆ ಟಿಕೆಟ್ ಸಿಗುವುದಾದರೆ ಪ್ರತಾಪ್ ಗೆ ಏಕೆ ಇಲ್ಲ? ಯಡಿಯೂರಪ್ಪನವರೇ ನಿಮಗೆ ಶೋಭಾ ಮುಖ್ಯನಾ? ಕಾರ್ಯಕರ್ತರಿಗಿಂತ ಶೋಭಾ ಕರಂದ್ಲಾಜೆ ಮುಖ್ಯಾ ನಾ? ಹಾಗಾದರೆ ನಮಗೆ ಶುಭಾ ಸೊಲಿಸುವುದೇ ಮುಖ್ಯ ಎಂದು ಕಿಡಿ ಕಾರಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ‘400’ ಸ್ಥಾನ ಗೆದ್ದರೆ ‘ಸಂವಿಧಾನ ಬದಲಾವಣೆ’ : ಮತ್ತೆ ವಿವಾದದ ಹೇಳಿಕೆ ನೀಡಿದ ಹೆಗ್ಡೆ
ಪ್ರತಾಪ್ ಸಿಂಹ ಬೇಡ ಅಂದರೆ ನಮಗೆ ಶೋಭಾ ಕರಂದ್ಲಾಜೆನೂ ಬೇಡ. ಪ್ರತಾಪ್ ಸಿಂಹ ಶೋಭಾ ಇಬ್ಬರನ್ನು ಬದಲಾಯಿಸಿ ಎಂದು ಚಿಕ್ಕಮಂಗಳೂರಿನ ಸಿಟಿ ರವಿ ಬೆಂಬಲಿತ ಬಿಜೆಪಿ ಕಾರ್ಯಕರ್ತರು ಆಕ್ರೋಶವನ್ನು ಹೊರ ಹಾಕಿದ್ದಾರೆ ಎಂದು ತಿಳಿದುಬಂದಿದೆ ಇಂದಿಗೂ ಕೂಡ ಶೋಭಾ ಗೋ ಬ್ಯಾಕ್ ಅಭಿಯಾನ ಮುಂದುವರೆದಿದೆ.