ಬಾಗಲಕೋಟೆ: ಶಾಸಕ ವಿಜಯಾನಂದ ಕಾಶಪ್ಪನವರ್ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಯತ್ನಾಳ ವಿವಾದಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ. ಯತ್ನಾಳ್ ಒಬ್ಬ ಹುಚ್ಚು ನಾಯಿ, ಆತನಿಗೆ ದಯೆಯೂ ಇಲ್ಲ ಧರ್ಮವು ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ.ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರ ವಚನ ಹೇಳಿ ಯತ್ನಾಳ್ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ ಆಕ್ರೋಶ ಹೊರ ಹಾಕಿದರು. ಯತ್ನಾಳ್ ಒಬ್ಬ ನರಪಿಳ್ಳೆ, ಯತ್ನಾಳ್ ಗೆ ದಯೆಯೂ ಇಲ್ಲ ಧರ್ಮವೂ ಇಲ್ಲ ಯತ್ನಾಳ್ ಒಬ್ಬ ಹುಚ್ಚು ನಾಯಿ ಗೊಡ್ಡು ಎಮ್ಮೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಕಿಡಿಕಾರಿದರು.