ಬೆಂಗಳೂರು : ಈಗಾಗಲೇ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸ್ನೇಹಮಯಿ ಕೃಷ್ಣ ಅವರು ಇಡಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಇಡಿ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಬಳಿಕ ಇತ್ತೀಚಿಗೆ ಸಿಎಂ ಪತ್ನಿ ಪಾರ್ವತಿಯವರು ಮುಡಾದ 14 ಸೈಟ್ ಗಳನ್ನು ವಾಪಾಸ್ ನೀಡಿದ್ದರು. ಈ ವಿಚಾರವಾಗಿ ಇದರಲ್ಲಿ ಯತಿಂದ್ರ ಸಿದ್ದರಾಮಯ್ಯ ಅವರು ಪಾಲುದಾರರಾಗಿದ್ದಾರೆ ಎಂದು ದೂರುದಾರ ಪ್ರದೀಪ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹೌದು ದೂರುದಾರ ಪ್ರದೀಪ್ ಎನ್ನುವವರು ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಾಕ್ಷಿ ನಾಶಪಡಿಸುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಇಡಿ ಅಧಿಕಾರಿಗಳಿಗೆ ಮತ್ತೊಂದು ಮನವಿ ನೀಡಿದ್ದಾರೆ. ಹಾಗಾಗಿ ತನಿಖೆ ನಡೆಸುವಂತೆ ಇಡಿಗೆ ದೂರುದಾರ ಪ್ರದೀಪ್ ಮನವಿ ಮಾಡಿದ್ದಾರೆ.
ಮುಡಾದ 14 ಸೈಟ್ ಸಂಬಂಧ ತನಿಖೆಗೆ ದೂರುದಾರ ಮನವಿ ಮಾಡಿದ್ದಾರೆ.ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಕೂಡ ಇದರಲ್ಲಿ ಪಾಲುದಾರರಾಗಿದ್ದಾರೆ.ಸೈಟ್ ವಾಪಸ್ ಪಡೆಯುವ ಮೂಲಕ ಸಾಕ್ಷ್ಯ ನಾಶ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳಿಗೆ ದೂರುದಾರ ಪ್ರದೀಪ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
14 ಸೈಟ್ಗಳ ಸಂಬಂಧ ಸಿಎಂ ವಿರುದ್ಧ ಸಾಕ್ಷಿ ನಾಶದ ಆರೋಪದ ಹಿನ್ನೆಲೆಯಲ್ಲಿ ಇದೀಗ ತನಿಖೆ ನಡೆಸುವಂತೆ ಪ್ರದೀಪ್ ಕುಮಾರ್ ಇಡಿಗೆ ಮನವಿ ಮಾಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಕೂಡ ಇದರಲ್ಲಿ ಪಾಲುದಾರರಾಗಿದ್ದಾರೆ. ಅಲ್ಲದೆ ಸೈಟ್ ವಾಪಸ್ ಪಡೆಯುವ ಮೂಲಕ ಸಾಕ್ಷ್ಯ ನಾಶ ಆಗಿದೆ.ಮುಡಾ ಅಧಿಕಾರಿಗಳನ್ನು ಬಳಸಿಕೊಂಡು ಸಾಕ್ಷಿಗಳನ್ನು ನಾಶ ಮಾಡಲಾಗುತ್ತಿದೆ. ಹಾಗಾಗಿ ಸಾಕ್ಷ ನಾಶ ಪ್ರಕರಣ ದಾಖಲು ಮಾಡಬೇಕೆಂದು ಇಡಿಗೆ ಮನವಿ ಸಲ್ಲಿಸಲಾಗಿದೆ.
ಮುಡಾ ಆಯುಕ್ತರು ಪಾರ್ವತಿ ಅವರ ಮನೆಗೆ ಹೋಗಿ ಸಹಿ ಮಾಡಿಸಿಕೊಂಡಿದ್ದಾರೆ.ಸೈಟ್ ವಾಪಸ್ ಪ್ರತಿಗೆ ಪಾರ್ವತಿ ಸಹಿ ಮಾಡಿಸಿಕೊಂಡು ಬಂದಿದ್ದಾರೆ. ಅಧಿಕಾರಿಗಳು ಆರೋಪಿಗಳ ಜೊತೆಗೆ ಸಾಕ್ಷಿ ನಾಶಕ್ಕೆ ಕೈಜೋಡಿಸಿದ್ದಾರೆ.ಹೀಗಾಗಿ ಮೂಡ ಅಧಿಕಾರಿಗಳ ವಿರುದ್ಧವು ಕ್ರಮಕ್ಕೆ ಪ್ರದೀಪ್ ಮನವಿ ಮಾಡಿದ್ದಾರೆ. ದಾಖಲೆ ಬದಲಾವಣೆ ಮಾಡುತ್ತಿರುವ ಮುಡ ಆಯುಕ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮುಡ ಆಯುಕ್ತರು ಅಧಿಕಾರಿಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವ ಬೀರುತ್ತಿದ್ದಾರೆ ಸಿಎಂ ಹಾಗೂ ಮತ್ತಿತರರ ವಿರುದ್ಧ ಕೆಎಸ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ ದಾಖಲೆ ವಶಕ್ಕೆ ಪಡೆಯಲು ಲೋಕಾಯುಕ್ತ ಎಸ್ಪಿಎಗೆ ಸೂಚಿಸಲು ಪ್ರದೀಪ್ ಈಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಜೊತೆಗೆ ಸಾಕ್ಷಿ ನಾಶ ಮಾಡುತ್ತಿರುವವರನ್ನು ಕೂಡ ಬಂಧಿಸುವಂತೆ ಮನವಿ ಮಾಡಿದ್ದಾರೆ.