ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : : ಎನ್ ಐ ಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಫಿಎಫ್ಐ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ನನ್ನು ಬಂಧಿಸಿದ್ದಾರೆ.
ಸದ್ಯ, ಈತನನ್ನು ದೆಹಲಿಗೆ ಕರೆತರಲಾಗುತ್ತಿದ್ದು, ಬಳಿಕ ಎನ್ ಐ ಎ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಈತ ಮುಸ್ಲಿಂ ಯುವಕರನ್ನು ಐಸಿಸ್ ಗೆ ಸೇರಿಸಲು ಪ್ರೇರೇಪಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ದೇಶದ ಒಳಗೆ ಹಣ ಒಗ್ಗೂಡಿಸಿ ಟೆರರ್ ಫಂಡಿಂಗ್ ನಡೆಸುತ್ತಿದ್ದನು ಎಂಬ ಆರೋಪದಡಿ ಅಧಿಕೃತವಾಗಿ ಯಾಸಿರ್ ಹಸನ್ ನ್ನು ಬಂಧಿಸಿ ಕರೆ ತರಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
BIGG NEWS : ಅಸ್ಸಾಂನಲ್ಲಿ ಮಕ್ಕಳ ಕಳ್ಳನೆಂದು ವಾಹನಕ್ಕೆ ಬೆಂಕಿ ಹಚ್ಚಿ, ಹಿಗ್ಗಾಮುಗ್ಗಾ ಥಳಿತ : ಗಂಭೀರ ಗಾಯ | Assam