ಬೆಂಗಳೂರು : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುಣಧೂರು ಗ್ರಾಮದ ನೀಲಗಿರಿ ತೋಪಿನಲ್ಲಿ ತಡರಾತ್ರಿ ನಟ ಯಶ್ ಅವರ ಹುಟ್ಟು ಹಬ್ಬದ ಅಂಗವಾಗಿ ಸುಮಾರು 25 ಅಡಿ ಕಟೌಟ್ ಅನ್ನು ಕಟ್ಟುವಾಗ ವಿದ್ಯುತ್ ಶಾಕ್ ತಗುಲಿ ಮೂರು ಯುವಕರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಕಿಂಗ್ ಸ್ಟಾರ್ ಯಶ್ ಇಂದು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಸೊರಣಗಿ ಗ್ರಾಮಕ್ಕೆ ನಟ ಯಶ್ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಯಶ್ ಅವರು ಇಂದು ಸಂಜೆ 4:00ಗೆ ಗದಗದ ಸೊರಣಗಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಮೃತರ ಸಂಬಂಧಿಕರಿಗೆ ನಟ ಯಶ್ ಸಾಂತ್ವನ ಹೇಳಲಿದ್ದಾರೆ.ಯಶ್ ಕಟೌಟ್ ಅಲಡಿಸುವಾಗ ಅವರ ಅಭಿಮಾನಿಗಳು ಮೂವರು ಸಾವನಪ್ಪಿದ್ದರು.
ಘಟನೇ ಹಿನ್ನೆಲೆ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುಣಧೂರು ಗ್ರಾಮದ ನೀಲಗಿರಿ ತೋಪಿನಲ್ಲಿ ತಡರಾತ್ರಿ ನಟ ಯಶ್ ಅವರ ಹುಟ್ಟು ಹಬ್ಬದ ಅಂಗವಾಗಿ ಸುಮಾರು 25 ಅಡಿ ಕಟೌಟ್ ಅನ್ನು ಕಟ್ಟುವಾಗ ವಿದ್ಯುತ್ ಶಾಕ್ ತಗುಲಿ ಮೂರು ಯುವಕರು ಸಾವನ್ನಪ್ಪಿದ್ದಾರೆ.
ಮೃತರನ್ನು ಹನುಮಂತ್ ಹರಿಜನ್ (21) ಮುರಳಿ ನಡುವಿನಮನಿ (20) ನವೀನ್ (19) ಮೃತ ದುರ್ದೈವಿಗಳಾಗಿದ್ದಾರೆ. ಘಟನೆ ಸಂಭವಿಸಿದ ತಕ್ಷಣ ದುರಂತದಲ್ಲಿ ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ. ಮಂಜುನಾಥ್ ದೀಪಕ್ ಹರಿಜನ್ ಹಾಗೂ ಪ್ರಕಾಶ್ ಎಂಬ ಯುವಕರಿಗೆ ಗಂಭೀರವಾದಂತಹ ಗಾಯಗಳಾಗಿವೆ.ತಡರಾತ್ರಿ ಬರ್ತಡೆ ಬ್ಯಾನರ್ ಕಟ್ಟುವಾಗ ನಡೆದ ದುರಂತವಾಗಿದೆ ಎಂದು ತಿಳಿದುಬಂದಿದೆ.
ತಡ ರಾತ್ರಿಯ ಸುಮಾರು 25 ಅಡಿಗು ಹೆಚ್ಚು ಎತ್ತರವಾಗಿರುವಂತಹ ಯಶ್ ಬ್ಯಾನರ್ ಅವರನ್ನು ಕಟ್ಟುವ ವೇಳೆ ವಿದ್ಯುತ್ ಶಾಕ್ ತಗೋಳಿ ಸ್ಥಳದಲ್ಲಿ ಮೂವರು ಯುವಕರು ಸಾವನಪ್ಪಿದ್ದಾರೆ. ಮೂವರು ಯುವಕರು ಕೂಲಿನಲ್ಲಿ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದು ಯಶ್ ಅವರ ಮೇಲೆ ಅಪಾರವಾದ ಅಂತಹ ಅಭಿಮಾನ ಹೊಂದಿದ್ದರು. ಮೃತ ಯುವಕರ ಮೇಲೆ ಮನೆ ನಿರ್ವಹಣೆ ನಡೆಯುತ್ತಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದು, ಸಾವನ್ನಪ್ಪಿರುವ ಯುವಕರ ಕುಟುಂಬದವರ ಆಕರಂದನ ಮುಗಿಲು ಮುಟ್ಟಿದೆ.ಇದೀಗ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಸರ್ಕಾರ ಎರಡು ಲಕ್ಷ ಪರಿಹಾರ ಘೋಷಿಸಿದ್ದು ಅಲ್ಲದೆ ಗಂಭೀರವಾಗಿ ಗಾಯಗೊಂಡಿರುವವರೆಗೂ ಕೂಡ 50,000 ಪರಿಹಾರವನ್ನು ಘೋಷಿಸಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಅವರು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.