ಬೆಂಗಳೂರು : ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿದಿನ ಒಂದಲ್ಲ ಒಂದು ಅಪಘಾತ ಪ್ರಕರಣಗಳು ಸಂಭವಿಸುತ್ತಲೆ ಇರುತ್ತದೆ. ಅದರಲ್ಲೂ ಹೆದ್ದಾರಿಗಳು, ಫ್ಲೈ ಓವರ್ಗಳಲ್ಲಿ ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸುತ್ತವೆ.ಅತೀ ಹೆಚ್ಚು ಅಪಘಾತಗೀಡಾಗುವ ರಸ್ತೆ ಪಟ್ಟಿ ಮಾಡಲಾಗಿದೆ.
ಬೆಂಗಳೂರಿನಲ್ಲಿ ಯಲಹಂಕದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ವರದಿಯಾಗಿವೆ. ಇಲ್ಲಿನ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ವರ್ಷದ ಮೊದಲ 10 ತಿಂಗಳಲ್ಲಿ ಈ ರಸ್ತೆಯಲ್ಲಿ ಮೃತಪಟ್ಟವರ ಸಂಖ್ಯೆ ಬರೋಬ್ಬರಿ 40 ರಷ್ಟಿದೆ ಎಂದು ಸಮೀಕ್ಷೆಯೊಂದು ಬಹಿರಂಗ ಪಡಿಸಿದೆ
2021 ರಲ್ಲಿ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 52 ಮಂದಿ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೃತಪಟ್ಟಿರುವ ವರದಿಯಾಗಿದೆ. ಈ ವರ್ಷದ ಮೊದಲ 10 ತಿಂಗಳಲ್ಲಿ ಈ ಸಂಖ್ಯೆ 40 ಕ್ಕೆ ಏರಿಕೆ ಆಗಿದೆ. ಯಲಹಂಕ ಬಳಿಕ ಈ ವರ್ಷ ರಸ್ತೆ ಅಪಘಾತಗಳಿಂದಾಗಿ ಅತಿ ಹೆಚ್ಚು ಸಾವುಗಳು ಸಂಭವಿಸಿರುವ ಎರಡನೇ ಪ್ರದೇಶ ಪಕ್ಕದ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಚಿಕ್ಕಜಾಲದಲ್ಲಿ 38 ಸಾವುಗಳು ವರದಿಯಾಗಿವೆ. ಕಾಮಾಕ್ಷಿಪಾಳ್ಯದಲ್ಲಿ 37, ಕೆಂಗೇರಿಯಲ್ಲಿ 30, ಕೆಎಸ್ ಲೇಔಟ್ನಲ್ಲಿ 28, ಪೀಣ್ಯಾದಲ್ಲಿ 26, ದೇವನಹಳ್ಳಿಯಲ್ಲಿ 24 ರಸ್ತೆ ಅಪಘಾತಗಳು ವರದಿಯಾಗಿವೆ.
ಬೆಂಗಳೂರಿನ 44 ಟ್ರಾಫಿಕ್ ಪೊಲೀಸ್ ಠಾಣೆಗಳಿಂದ ಪಡೆದ ಮಾಹಿತಿಯ ಪ್ರಕಾರ, 2021 ರಲ್ಲಿ ಚಿಕ್ಕಜಾಲವು ಮೂರನೇ ಅತಿ ಹೆಚ್ಚು ಅಂದರೆ 40 ಸಾವುಗಳನ್ನು ಕಂಡಿದೆ. ನಗರದಲ್ಲಿ ಕಳೆದ ವರ್ಷ ವರದಿಯಾದ 675 ರಸ್ತೆ ಅಪಘಾತ ಸಾವುಗಳಲ್ಲಿ ಯಲಹಂಕ ಮತ್ತು ಚಿಕ್ಕಜಾಲದ ಪ್ರಮಾಣ ಕ್ರಮವಾಗಿ 7.7% ಮತ್ತು 6% ರಷ್ಟಿದೆ. ಈ ವರ್ಷ, ಮೊದಲ 10 ತಿಂಗಳಲ್ಲಿ 577 ರಸ್ತೆ ಅಪಘಾತ ಸಾವುಗಳಲ್ಲಿ, ಎರಡು ಸ್ಥಳಗಳ ಪ್ರಮಾಣ ಕ್ರಮವಾಗಿ 6.9% ಮತ್ತು 6.6% ರಷ್ಟಿದೆ.ಮುಂದಿನ ವರ್ಷಗಳಲ್ಲಿ ಯಾವ ರಸ್ತೆ ಅತೀ ಹೆಚ್ಚು ಅಪಘಾತ ಸಂಭವಿಸಿದ ರಸ್ತೆ ಎಂದು ಕಾದು ನೋಡಬೇಕಿದೆ. ಇನ್ನದರೂ ವಾಹನಾ ಸವಾರರು ಎಚ್ಚರಿಕೆಯಿಂದ ವಾಹನಗಳನ್ನು ಸಂಚಾರ ಮಾಡಬೇಕಾಗಿದೆ.