ಯಾದಗಿರಿ : ಐಪಿಎಲ್ ಶುರು ಆದರೆ ಸಾಕು ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತೆ. ನಿನ್ನೆ ತಾನೇ ಬೆಂಗಳೂರಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.ಇದರ ಬೆನ್ನಲ್ಲೆ ಇದೀಗ ಯಾದಗಿರಿಯಲ್ಲಿ ಇಬ್ಬರು ಬುಕ್ಕಿಗಳನ್ನು ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಾದಗಿರಿ ಸೆನ್ ಠಾಣೆಯ ಪೊಲೀಸರಿಂದ ಬುಕ್ಕಿಗಳು ಅರೆಸ್ಟ್ ಆಗಿದ್ದಾರೆ ಸುರಪುರ ತಾಲೂಕಿನ ಗ್ರಾಮದ ಶ್ರವಣ್ ಹಾಗೂ ಹುಣಸಗಿ ತಾಲೂಕಿನ ಹೆಬ್ಬಾಳ (ಕೆ) ಗ್ರಾಮದ ದೇವರಾಜ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಇ ವೇಳೆ ಕಾರು ಮತ್ತು ಬ್ಯಾಂಕ್ ಖಾತೆಯಲ್ಲಿದ್ದ 11 ಲಕ್ಷ ಹಣವನ್ನು ಮಾಡಿದ್ದಾರೆ ಯಾದಗಿರಿ ಸರ್ಕಾರಿ ಡಿಗ್ರಿ ಕಾಲೇಜು ಕ್ರಾಸ್ ಬಳಿ ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.