ಯಾದಗಿರಿ : ಯಾದಗಿರಿ ಪಿಎಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಸಿಐಡಿ ಅಧಿಕಾರಿಗಳು ಕೇಸ್ ಫೈಲ್ ಪಡೆದಿದ್ದಾಗಿ ಪೊಲೀಸರು ತಿಳಿಸಿದರು ಆದರೆ ಎಫ್ಎಸ್ಎಲ್ ವರದಿ ಬರುವವರೆಗೂ ನಾವು ಕೆ ಎಸ್ ಫೈಲ್ ಪಡೆಯುವುದಿಲ್ಲ ಎಂದು ಹೇಳಿ ಅಧಿಕಾರಿಗಳು ತಿಳಿಸಿದ್ದಾರೆ.
ಹೌದು ಪಿಎಸ್ಐ ಪರಶುರಾಮ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆಗಾಗಿ ಸಿಐಡಿ ಗೆ ವಹಿಸಿತ್ತು. ಈ ವೇಳೆ ಸಿಐಡಿ ಅಧಿಕಾರಿಗಳು ಎಫ್ ಎಸ್ ಎಲ್ ಬರೋವರೆಗೂ ಕೆಸ್ ಫೈಲ್ ಪಡೆಯಲ್ಲ ಎಂದಿದ್ದಾರೆ. ಎಫ್ ಎಸ್ ಎಲ್ ವರದಿ ಜೊತೆ ಕೇಸ್ ಫೈಲ್ ನೀಡಿ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರಣಕ್ಕಾಗಿ ಪೊಲೀಸರು ಎಫ್ ಎಸ್ ಎಲ್ ವರದಿ ತಂದುಕೊಡಲು ಮುಂದಾಗಿದ್ದಾರೆ. ಎಫ್ ಎಸ್ ಎಲ್ ವರದಿ ತರಲು ಡಿವೈಎಸ್ಪಿ ಹಂತದ ಅಧಿಕಾರಿಯನ್ನು ಇದೀಗ sp ಅವರು ಕಳುಹಿಸಿದ್ದಾರೆ. ಸಾಮಾನ್ಯವಾಗಿ ಎಫ್ ಎಸ್ ಎಲ್ ವರದಿ ಬರಲು 15 ದಿನಗಳು ಬೇಕಾಗುತ್ತದೆ.ವಿಶೇಷ ಪ್ರಕರಣವಾಗಿದ್ದರಿಂದ ಒಂದೇ ದಿನದಲ್ಲಿ ಎಫ್ ಎಸ್ ಎಲ್ ವರದಿ ತರಲು ಇದೀಗ ಪೊಲೀಸರು ಮುಂದಾಗಿದ್ದಾರೆ.
ಎಫ್ ಎಸ್ ಎಲ್ ವರದಿ ಬಂದ ನಂತರ ಕೇಸ್ ಫೈಲ್ ಹಸ್ತಾಂತರ ಮಾಡುವ ಪೊಲೀಸರು ಬೆಳಿಗ್ಗೆ ಎಫ್ ಎಸ ಎಲ್ ವರದಿಗಾಗಿ ಸ್ಯಾಂಪಲ್ ಕೊಂಡೋಯ್ದಿದ್ದಾರೆ. ಮೃತ ದೇಹದ ಅಂಗಾಂಗಗಳ ಸ್ಯಾಂಪಲ್ ಅನ್ನು ಅಧಿಕಾರಿಗಳು ಕೊಂಡೋಯ್ದಿದ್ದಾರೆ ಇದೀಗ ಕಲಬುರ್ಗಿ ಎಫ್ ಎಸ್ ಎಲ್ ಗೆಪೊಲೀಸ ಅಧಿಕಾರಿಗಳು ತೆರಳಿದ್ದಾರೆ ಎಂದು ಪೊಲೀಸ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.