ಯಾದಗಿರಿ : ಕಳೆದ 3 ವರ್ಷದಿಂದ ನನಗೆ ಸಂಬಳ ಆಗಿಲ್ಲ ಎಂದು ಗ್ರಾಂ ಪಂಚಾಯತ್ ಸ್ವಚ್ಛತಾ ವಾಹಿನಿ ಚಾಲಕಿ ಕಣ್ಣೀರು ಹಾಕಿದ್ದಾರೆ. ಯಾದಗಿರಿಯ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಪುರ ಅವರ ಮುಂದೆ ಕಣ್ಣೀರು ಹಾಕಿದ್ದಾರೆ.
ಹತ್ತಿಗುಡೂರು ಗ್ರಾಮ ಪಂಚಾಯತಿ ಸ್ವಚ್ಛತಾ ವಾಹಿನಿ ಚಾಲಾಕಿ ಅನಿರಾಧಾ ಅವರು, ಕಳೆದ 3 ವರ್ಷಗಳಿಂದ ನಾನು ಸಂಬಳ ಇಲ್ಲದೆ ದುಡಿಯುತ್ತಿದ್ದೇನೆ. ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ. ಹಾಗಾಗಿ ಶೀಘ್ರದಲ್ಲಿ ವೇತನ ಮಾಡಿಸಿಕೊಡಿ ಎಂದು ಚಾಲಕಿ ಸಚಿವರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಈ ವೇಳೆ ಶರಣಬಸಪ್ಪ ದರ್ಶನಾಪುರ ನಾನು ಈ ಕ್ಷೇತ್ರದ ಶಾಸಕನಿದ್ದೇನೆ. ಕಳೆದ ಮೂರು ವರ್ಷಗಳಿಂದ ವೇತನ ಇಲ್ಲ ಅಂತ ಹೇಳುತ್ತಿದ್ದೀಯಲ್ಲಮ್ಮ ನನ್ನನ್ನು ಭೇಟಿಯಾಗಿ ಒಂದು ಮಾತು ಹೇಳಬೇಕು ತಾನೆ? ಅಧಿಕಾರಿಗಳಿಗೆ ಹೇಳಿ ಶೀಘ್ರದಲ್ಲಿ ವೇತನ ಬಿಡುಗಡೆ ಮಾಡಿಸುವುದಾಗಿ ಈ ವೇಳೆ ಸಚಿವ ಶರಣಬಸಪ್ಪ ದರ್ಶನಾಪುರ್ ಭರವಸೆ ಕೊಟ್ಟಿದ್ದಾರೆ.