ಯಾದಗಿರಿ : ಮನೆಯ ಮಾಲೀಕ ಮಕ್ಕಳನ್ನು ಶಾಲೆಗೆ ಸೇರಿಸಲೆಂದು ಕಲಬುರ್ಗಿಗೆ ತೆರಳಿದ್ದಾಗ, ಕಳ್ಳರು ಕೈಚಳಕ ತೋರಿಸಿದ್ದು ಮನೆಯ ಬೀಗ ಒಡೆದು ಮನೆಯಲ್ಲಿದ್ದ ಸುಮಾರು 500 ಗ್ರಾಂ ಚಿನ್ನ 5 ಲಕ್ಷ ರೂಪಾಯಿ ನಗರದನ್ನು ಕಳ್ಳತನ ಮಾಡಿರುವ ಘಟನೆ ಯಾದಗಿರಿ ನಗರದ ವಾಲ್ಮೀಕಿ ಭವನದ ಬಳಿ ಘಟನೆ ನಡೆದಿದೆ.
ಹೌದು ಹಾಡು ಹಗಲೇ ಮನೆಯಲ್ಲಿದ್ದ 500 ಗ್ರಾಂ ಚಿನ್ನ 5 ಲಕ್ಷ ನಗದು ಕಳವು ಮಾಡಿರುವ ಘಟನೆ ಯಾದಗಿರಿ ನಗರದ ವಾಲ್ಮೀಕಿ ಭವನದ ಬಳಿ ನಡೆದಿದೆ. ರಾಘವೇಂದ್ರ ಕಟ್ಟಿಮನಿ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆಮಕ್ಕಳನ್ನು ಶಾಲೆಗೆ ಸೇರಿಸಲು ಕಲಬುರ್ಗಿಗೆ ತೆರಳಿದ್ದಾಗ ಕಳ್ಳರಿಂದ ಈ ಕೃತ್ಯ ನಡೆದಿದೆ.
ಮನೆ ವೇಗ ಒಡೆದು ಎರಡು ಬೆಡ್ ರೂಮ್ನಲ್ಲಿದ್ದ ಚಿನ್ನ ಹಾಗೂ 5 ಲಕ್ಷ ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿದ್ದಾರೆ. ಲಾಕರ್ ಸಮೇತ ಚಿನ್ನಾಭರಣ ನಗದನ್ನು ಕದ್ದುಯ್ದಿದ್ದಾರೆ. ಇಬ್ಬರು ಕಳ್ಳರು ಮನೆಯಲ್ಲಿ ಓಡಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.