ಚಿತ್ರದುರ್ಗ,ನ,೧೬- ಜನಪ್ರಿಯ ಕತೆಗಳಿಗೆ ಚಲನಚಿತ್ರಗಳ ಸಂಭಾಷಣೆಯಲ್ಲಿ ಸಾಹಿತ್ಯದ ಸ್ಪರ್ಶ ಮೂಡಿಸುವ ಮೂಲಕ ಹೊಸ ಅಧ್ಯಾಯವನ್ನು ಬಿ.ಎಲ್.ವೇಣು ಸೃಷ್ಟಿಸಿದರು ಎಂದು ಚಿಂತಕ ಹಾಗೂ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.ಕೆಂಧೂಳಿ ವಾರಪತ್ರಿಕೆ ಬಳಗದಿಂದ ಕೊಡಮಾಡುವ ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿಯನ್ನು ಬಿ.ಎಲ್ ವೇಣು ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು,
ಬಿ.ಎಲ್ ವೇಣು ಅವರು ಜನಪ್ರಿಯ ಕತೆ,ಕಾದಂಬರಿಕಾರರು ಸಹಜವಾಗಿಯೇ ಚಲನಚಿತ್ರಗಳ ಸಂಭಾಷಣೆಯ ಅವಕಾಶ ಬಂದಾಗ ಅದಕ್ಕೊಂದು ಸಾಹಿತ್ಯದ ಸ್ಪರ್ಶನೀಡಿ ಹೊಸ ಅರ್ಥ ಸೃಷ್ಟಿಸಿದರು ಎಂದು ಅವರು ಹೇಳಿದರು.ಸಮಾಜದ ದೊಡ್ಡ ಸಮಸ್ಯೆಯಾಗಿದ್ದ ಬೆತ್ತಲೆ ಸೇವೆಯಂತ ಸಾಮಾಜಿಕ ಸಮಸ್ಯೆಯ ಕುರಿತು ಬರೆದ ಕಾದಂಬರಿ ಲಕ್ಷಾಂತರ ಜನರಿಗೆ ಅದರ ಅರಿವು ಮೂಡಿಸುವ ಮೂಲಕ ಅನಿಷ್ಟ ಪದ್ದತಿಯನ್ನು ಹೋಗಲಾಡಿಲಸು ಕಾರಣವಾಯಿತು ಅಲ್ಲದೆ ಅದು ಚಲನಚಿತ್ರವಾಗುವ ಮೂಲಕ ಮತ್ತಷ್ಟು ಜನರಿಗೆ ಅರಿವು ಮೂಡಿಸಿದ ಕೆಲಸ ಮಾಡಿಸಿತು ಎಂದು ಅಭಿಪ್ರಾಯಪಟ್ಟರು.
ಚಿತ್ರದುರ್ಗ ಇತಿಹಾಸವನ್ನು ಬರೆದ ವೇಣು ಅವರು ಅಪವಾದವಾಗಿದ್ದ ಹಿದು ಮುಸ್ಲಿಂ ನ ದ್ವೇಷಭಾವನೆಯನ್ನು ಅವರು ಕಲ್ಲರಳಿ ಹೂವಾಗಿ ಕಾದಂಬರಿ ಮೂಲಕ ಹಿಂದು ಮುಸ್ಲಿಂ ಸಾಮರಸ್ಯ ಹೇಗಿತ್ತು ಎನ್ನುವ ಅರಿವನ್ನು ಮೂಡಿಸಲು ಅವರು ಕಾರಣಕರ್ತರಾಗಿದ್ದಾರೆ ಅಲ್ಲದೆ ಅದು ಕೂಡ ಚಿತ್ರವಾಗಿ ದೊಡ್ಡ ಯಶಸ್ಸನ್ನು ಪಡೆದಿದೆ ಎಂದರೆ ಅದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ವೇಣು ಅವರ ಗಟ್ಟಿ ನಿಲುವು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ, ಜನಪ್ರಿಯ ಹಾಗೂ ಜನಪರ ಸಾಹಿತಿಯಾಗಿ ಸೃಜನಶೀಲತೆಯನ್ನು ಮೈಗೂಡಿಸಕೊಳ್ಳಲು ಸಾದ್ಯವಾಗುತ್ತಿರಲಿಲ್ಲ ಹಾಗಾಗಿಯೇ ಜನಪರ ನಿಲುವು ಹೊಂದಿದ ಸಾಹಿತಿ ಜನಪ್ರಿಯಯತೆ ಪಡೆಯುವುದು ಸುಲಭವಲ್ಲ,ನಂಬಿದ ನಿಲುವು,ಜನಪರ ಕಾಳಜಿಯನ್ನು ಅವರು ಜನಪ್ರಿಯ ಕಾದಂಬರಿಯಲ್ಲಿ ಮೂಡಿಸಿರುವ ರೀತಿ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯ ಅಕಾಡಮಿಯಲ್ಲಿ ಜನಪ್ರಿಯ ಸಾಹಿತಿಗಳಿಗೆ ಜೀವಮಾನದ ಪ್ರಶಸ್ತಿ ನೀಡಲು ಹಿಂದೆ ಸರಿದ ಸಂದರ್ಭದಲ್ಲಿ ನಾನು ಅಕಾಡಮಿಯಲ್ಲಿದ್ದಾಗ ಅವರ ಒಟ್ಟು ಸಾಹಿತ್ಯಕ್ಕೆ ಜೀವಮಾನ ಪ್ರಶಸ್ತಿ ಕೊಡಿಸುವ ಮೂಲಕ ಜನಪ್ರಿಯ ಸಾಹಿತಿಯೊಬ್ಬರಿಗೆ ಮೊದಲಬಾರಿಗೆ ಪ್ರಶಸ್ತಿದೊರತ ಶ್ರೇಯಸ್ಸು ಅವರದ್ದು ಎಂದು ಘಟನೆಯೊಂದನ್ನು ನೆನಪಿಸಿಕೊಂಡರು.
ವೇಣು ಅವರಿಗೆ ಬಹುತೇಕ ಎಲ್ಲಾ ಪ್ರಶಸ್ತಿಗಳು ಬಂದಿವೆ, ಕೆಂಧೂಳಿ ಪ್ರಶಸ್ತಿ ಅವರಿಗೇನು ದೊಡ್ಡದಲ್ಲ ಆದರೆ ಕೆಂಧೂಳಿ ಮೌಲ್ಯ ಹೆಚ್ಚಿಸಲು ಈ ಪ್ರಶಸ್ತಿ ಪ್ರಮುಖವಾಗಿದೆ ಎಂದು ಹೇಳಿದರು.
ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಬಿ.ಎಲ್.ವೇಣು ಅವರು ಪ್ರಶಸ್ತಿಗಳೆಲ್ಲವೂ ಒಂದೇ ಯಾವುದೊಡ್ಡವು ಅಲ್ಲ ಯಾವುದು ಸಣ್ಣದು ಅಲ್ಲ ಅದಕ್ಕೊಂದು ಗೌರವವಿದೆ ಪ್ರಶಸ್ತಿ ಸ್ವೀಕರಿಸುವವರಿಗೆ ಜವಾಬ್ದಾರಿಯೂ ಹೆಚ್ಚಾಗುತ್ತದೆ ಎಂದ ಅವರು ನನಗೆ ಬಹುತೇಕ ಎಲ್ಲಾ ಪ್ರಶಸ್ತಿಗಳು ಬಂದಿವೆ ಆದರೆ ಕೇಂದ್ರ ಆಕಾಡೆಮಿ ಪ್ರಶಸ್ತಿ ಮಾತ್ರ ಬಂದಿಲ್ಲ ಎಂದು ಹಾಸ್ಯಚಟಾಕೆ ಹಾರಿಸಿದರು.
ನನಗೆ ಗೊತ್ತಿರುವುದು ಬರವಣಿಗೆ ನಾನು ಇರುವವರೆಗೂ ಬರೆಯುತ್ತೇನೆ ಬರಹವೇ ನನ್ನ ಉಸಿರು ಹಾಗಾಗಿಯೇ ಉಸಿರಿರುವವರೆಗೂ ನಾನು ಬರೆಯುತ್ತಲೇ ಇರುತ್ತೇನೆ ಎಂದ ಅವರು. ಕೆಂಧೂಳಿ ಪತ್ರಿಕೆ ನನ್ನ ಮೇಲಿನ ಗೌರವಕ್ಕೆ ಈ ಪ್ರಶಸ್ತಿಯನ್ನು ನೀಡಿದೆ, ಪತ್ರಿಕೆ ಮತ್ತಷ್ಟು ಬೆಳೆಯಲಿ ಎಂದು ಹಾರೈಸಿದರು. ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಚಳ್ಳಕೆರೆ ಯರ್ರಿಸ್ವಾಮಿ, ಕೆಂಧೂಳಿ ಪತ್ರಿಕೆ ಸಂಪಾಕ ತುರುವನೂರು ಮಂಜುನಾಥ, ಪತ್ರಕರ್ತ ಎಚ್.ಲಕ್ಷ್ಮಣ್, ಹರೀಶ್ ಬೇದ್ರೆ ಇದ್ದರು.








