ಬೆಂಗಳೂರು: ಜಾತಿಗಣತಿ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ಮಹತ್ವದ ಸಭೆ ನಡೆಯಿತು.ಈ ವೇಳೆ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದ್ದು, ಅದರಂತೆ ಧರ್ಮ ಹಿಂದೂ, ಜಾತಿ ಒಕ್ಕಲಿಗ ಅಂಥ ಬರೆಸಿ ಅಂತ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಸಭೆಯಲ್ಲಿ ಯಾರೂ ಗೊಂದಲ ಮಾಡಿಕೊಳ್ಳಬೇಡಿ, ಉಪಜಾತಿಯಲ್ಲಿ ಕೂಡ ಒಕ್ಕಲಿಗೆ ಅಂತ ಬರೆಸಿ ಅಂತ ತಮ್ಮ ಜನಾಂಗದ ಜನತೆಗೆ ಮನವಿಮಾಡಿಕೊಳ್ಲಲಾಗಿದೆ. ಸಭೆಯಲ್ಲಿ ಡಿಸಿಎಂ ಶಿವಕುಮಾರ್ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಸಮಾಜದ ಹಲವು ಮಂದಿ ಹಾಜರಿದ್ದರು.