ಹೈದರಾಬಾದ್: ಹೈದರಾಬಾದ್ನಲ್ಲಿ ಗಣೇಶ ಹಬ್ಬದಲ್ಲಿ ಪೂಜೆ ಮಾಡಲಾಗುವ ಲಡ್ಡೂಗಳು ಭಾರೀ ಮೊತ್ತಕ್ಕೆ ಹರಾಜು ಆಗುತ್ತವೆ. ಆದ್ರೆ, ಈ ವರ್ಷ ಬಾಲಾಪುರ ಗಣೇಶನ ಲಡ್ಡೂ ಬೆಲೆಯನ್ನು ಮೀರಿ ಲಡ್ಡುವೊಂದು ಸೇ ಆಗಿದೆ.
ಹೌದು, ಈ ವರ್ಷ ನಗರದ ಗೇಟೆಡ್ ಸಮುದಾಯವಾದ ರಿಚ್ಮಂಡ್ ವಿಲ್ಲಾ ಸನ್ ಸಿಟಿಯಲ್ಲಿ 10-12 ಕೆಜಿ ಲಡ್ಡೂ ₹ 60.8 ಲಕ್ಷಕ್ಕೆ ಸೇಲಾಗಿದೆ. ಮರಕಥೆ ಶ್ರೀ ಲಕ್ಷ್ಮೀ ಗಣಪತಿ ಉತ್ಸವ ಪಂಗಡದ ಗಣೇಶ ಲಡ್ಡು ಸುಮಾರು ₹ 46 ಲಕ್ಷಕ್ಕೆ ಮಾರಾಟವಾದರೆ, ಬಾಲಾಪುರ ಗಣೇಶ ಲಡ್ಡು ₹ 24.60 ಲಕ್ಷಕ್ಕೆ ಮಾರಾಟವಾಗಿದೆ.
ಗಣೇಶ ಲಡ್ಡುಗಳು ಅದೃಷ್ಟ, ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತವೆ ಎಂದು ಸ್ಥಳೀಯ ನಿವಾಸಿಗಳು ನಂಬುತ್ತಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ, ರಿಚ್ಮಂಡ್ ವಿಲ್ಲಾ ಸನ್ ಸಿಟಿಯ ನಿವಾಸಿ ಡಾ ಸಾಜಿ ಡಿಸೋಜಾ, ಸುಮಾರು 100 ನಿವಾಸಿಗಳು ಲಡ್ಡೂ ಖರೀದಿಸಲು ಒಟ್ಟಾಗಿ ಸೇರಿದ್ದರು. ನಮ್ಮಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು ಇದ್ದಾರೆ, ಆದರೆ, ನಾವೆಲ್ಲರೂ ನಂಬುವ ಏಕೈಕ ಧರ್ಮವೆಂದರೆ ಅದು ಮಾನವೀಯತೆ. ಗಣೇಶ ಹಬ್ಬ ನಾವೆಲ್ಲರೂ ಒಗ್ಗೂಡಿ ಮಾನವೀಯತೆಯನ್ನು ಆಚರಿಸಲು ಉತ್ತಮ ಸಂದರ್ಭವಾಗಿದೆ ಎಂದು ಅವರು ಹೇಳಿದರು.
BIGG NEWS : ಪೋಕ್ಸೋ ಪ್ರಕರಣ : ಇಂದು ಮುರುಘಾ ಶರಣರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ