ಶಿವಮೊಗ್ಗ: ಡಿಸೆಂಬರ್.29ರಂದು ಕುಪ್ಪಳ್ಳಿಯಲ್ಲಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನಲೆಯಲ್ಲಿ ಮುಂದೂಡಿಕೆ ಮಾಡಲಾಗಿದೆ.
ಈ ಬಗ್ಗೆ ಕುಪ್ಪಳ್ಳಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಡಾಕ್ಟರ್ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಶೋಕಾಚರಣೆ ಇರುವುದರಿಂದ 29- 12 -2024 ರಂದು ಕುಪ್ಪಳಿಯಲ್ಲಿ ನಡೆಯಬೇಕಾಗಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದಿದ್ದಾರೆ.
ಆ ದಿನ ಸಮಾರಂಭ ಕುಪ್ಪಳಿಯಲ್ಲಿ ನಡೆಯುವುದಿಲ್ಲ. ಬೆಳಗ್ಗೆ 10 ರಿಂದ 11 ರವರೆಗೆ ಕವಿಶೈಲದಲ್ಲಿ ಕವಿ ನಮನ ಮಾತ್ರ ಇರುತ್ತದೆ. ಅದೇ ದಿನ ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
BREAKING:’ಸುಜುಕಿ ಮೋಟಾರ್’ ಕಂಪನಿಯ ಮಾಜಿ ಅಧ್ಯಕ್ಷ ಒಸಾಮು ಸುಜುಕಿ ನಿಧನ
SHOCKING NEWS: ನಮ್ಮ ಅತ್ತೆ ಬೇಗ ಸಾಯಬೇಕು: ನೋಟಿನ ಮೇಲೆ ಹರಕೆ ಬರೆದು ಹಾಕಿದ ಸೊಸೆ, ಪೋಟೋ ವೈರಲ್