ನ್ಯೂಜೆರ್ಸಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶೇಷ ಸಂದರ್ಶನವೊಂದರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು “ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ” ಮತ್ತು ಭಾರತವು “ನನಗಿಂತ ಉತ್ತಮ ಸ್ನೇಹಿತನನ್ನು ಹೊಂದಿಲ್ಲ” ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಥವಾ ಬರಾಕ್ ಒಬಾಮಾ ಅವರಿಗಿಂತ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ನನ್ನ ಸಂಬಂಧದ ಬಗ್ಗೆ ನೀವು ಪ್ರಧಾನಿ ಮೋದಿಯನ್ನು ಕೇಳಬೇಕಾಗುತ್ತದೆ “. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಎಲ್ಲರೂ ಮತ್ತೊಮ್ಮೆ ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂದು ಬಯಸುತ್ತಾರೆ. ನಾನು ಚುನಾವಣೆಯಲ್ಲಿ ಮುನ್ನಡೆ ಸಾಧಿಸುತ್ತಿದ್ದೇನೆ … ನಾನು ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ” ಎಂದಿದ್ದಾರೆ.
“ನನಗೆ ಭಾರತ ಮತ್ತು ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಸಂಬಂಧವಿದೆ. ನಾವು ಸ್ನೇಹಿತರಾಗಿದ್ದೇವೆ. ಮೋದಿ ಅವರು ಉತ್ತಮ ವ್ಯಕ್ತಿ ಮತ್ತು ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದು ಅವರಿಗೆ ಸಿಕ್ಕಿರುವುದು ಸುಲಭದ ಕೆಲಸವಲ್ಲ. ಹಾಗಾಗಿ, ನಾವು ಬಹಳ ಸಮಯದಿಂದ ಒಬ್ಬರಿಗೊಬ್ಬರು ಪರಿಚಿತರು, ಅವರು ಒಳ್ಳೆಯ ಮನುಷ್ಯ” ಎಂದಿದ್ದಾರೆ.
‘ಪಿ ಡಿ ಹಿಂದುಜಾ ಸಿಂಧಿ ಆಸ್ಪತ್ರೆ’ಯ ‘ಸಿಟಿ ಸ್ಕ್ಯಾನ್ ಘಟಕ’ ಉದ್ಘಾಟಿಸಿದ ‘ಸಂಸದ ತೇಜಸ್ವಿ ಸೂರ್ಯ’
BREAKING NEWS: ಇಂದು ನಡೆಯಬೇಕಿದ್ದಂತ ರಾಜ್ಯ ಸಚಿವ ಸಂಪುಟ ಸಭೆ ಮುಂದೂಡಿಕೆ