ಯುಜೀನ್ (ಅಮೆರಿಕ): 2022ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಇಂದಿನಿಂದ ಅಮೆರಿಕದ ಯುಜೀನ್ನಲ್ಲಿ ಆರಂಭವಾಗಲಿದ್ದು, ಎಲ್ಲರ ನಿರೀಕ್ಷೆ
ಒಲಿಂಪಿಕ್ ಚಾಂಪಿಯನ್ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಮೇಲಿದೆ.
10 ದಿನಗಳ ಕಾಲ ನಡೆಯುವ ಈ ಕೂಟದಲ್ಲಿ 49 ವಿವಿಧ ಸ್ಪರ್ಧೆಗಳು ನಡೆಯಲಿದ್ದು, 2000 ದಷ್ಟು ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಈ ಕೂಟದಲ್ಲಿ ಭಾರತದ ಐವರು ಮಹಿಳಾ ಅಥ್ಲೀಟ್ಗಳು ಸೇರಿದಂತೆ ಒಟ್ಟು 22 ಮಂದಿ ಪಾಲ್ಗೊಳ್ಳುತ್ತಿದ್ದು, ವಿವಿಧ ಸ್ಪರ್ಧೆಗಳಲ್ಲಿ ಪದಕಕ್ಕಾಗಿ ಹೋರಾಡಲಿದ್ದಾರೆ.
So who’s gonna be the world 100m champion? 🤔
We asked some of the world’s best athletes… 😌#WorldAthleticsChamps pic.twitter.com/SFlIqrasAD
— World Athletics (@WorldAthletics) July 14, 2022
ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಐತಿಹಾಸಿಕ ಪದಕ ಗೆಲ್ಲಲು ಉತ್ಸುಕರಗಿದ್ದಾರೆ. ಟೋಕಿಯೋ ಒಲಂಪಿಕ್ ಬಳಿಕ 2 ಬಾರಿ ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಗಳನ್ನು ಮುರಿದಿರುವ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಐತಿಹಾಸಿಕ ಪದಕ ಗೆಲ್ಲಲು ಉತ್ಸುಕರಗಿದ್ದಾರೆ.
ಜೂನ್ 30 ರಂದು ಸ್ಟಾಕ್ಹೋಮ್ ಡೈಮಂಡ್ ಲೀಗ್ನಲ್ಲಿ 89.94 ಮೀ ದೂರ ಜಾವೆಲಿನ್ ಎಸೆದು ಬರೆದಿದ್ದು, ಇದೀಗ 90 ಮೀ. ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕವು ಚೋಪ್ರಾಗೆ ಮತ್ತೊಂದು ಇತಿಹಾಸದ ತುಣುಕು. ಏಕೆಂದರೆ, ಅವರು ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಮತ್ತು ದೇಶದ ಮೊದಲ ಪುರುಷ ಆಟಗಾರನಾಗಲಿದ್ದಾರೆ. ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ 2003 ರಲ್ಲಿ ಪ್ಯಾರಿಸ್ನಲ್ಲಿ ಕಂಚು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇನ್ನೂ, ಲಾಂಗ್ ಜಂಪ್ ಪಟು ಮುರಳಿ ಶ್ರೀ ಶಂಕರ್, 3000 ಮೀ. ಸ್ಟೀಪಲ್ಚೇಸ್ನ ಅವಿನಾಶ್ ಸಾಬ್ಳೆ ಸೇರಿದಂತೆ ರಾಷ್ಟ್ರೀಯ ದಾಖಲೆ ಹೊಂದಿರುವ 7 ಮಂದಿ ಕೂಟದಲ್ಲಿ ಸ್ಪರ್ಧಿಸುತ್ತಿದ್ದು, ಪದಕ ಗೆಲ್ಲಲು ಎದುರು ನೋಡುತ್ತಿದ್ದಾರೆ.
Good News : ‘ಕಾಶಿ ಯಾತ್ರೆ’ಗೆ ತೆರಳೋರಿಗೆ ಗುಡ್ ನ್ಯೂಸ್ : ಸಿಗಲಿದೆ 5 ಸಾವಿರ ಸಹಾಯ ಧನ : ಇಲ್ಲಿದೆ ಮಾಹಿತಿ
BIG NEWS: ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೊನಾ ‘ಬೂಸ್ಟರ್ ಲಸಿಕೆ’