ಬೆಂಗಳೂರು : 60 ವರ್ಷ ವಯೋಮಿತಿ ಪೂರ್ಣಗೊಳಿಸಿದ ನೋಂದಾಯಿತ ಕಾರ್ಮಿಕರಿಗೆ ಮಂಡಳಿಯು ಮಾಸಿಕ ಪಿಂಚಣಿ ಸೌಲಭ್ಯವನ್ನು ನೀಡುತ್ತದೆ. ಫಲಾನುಭವಿಯು ಈ ಸೌಲಭ್ಯವನ್ನು ಪಡೆಯಲು ಮಂಡಳಿಗೆ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.
ಸೌಲಭ್ಯ ಪಡೆಯುವುದು ಹೇಗೆ?
60 ವರ್ಷ ತಲುಪಿದ ನಂತರ ಒ೦ದು ವರ್ಷದೊಳಗೆ ಮ೦ಡಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು
ಗಮನಿಸಿ
ಪಿ೦ಚಣಿ ಸೌಲಭ್ಯ ಪಡೆಯಲು ಫಲಾನುಭವಿ 60 ವರ್ಷ ವಯೋಮಿತಿ ಪೂರ್ಣಗೊಳಿಸಿರಬೇಕು
60 ವರ್ಷ ಪೂರ್ಣಗೊಳ್ಳುವ ಮುನ್ನ ಕನಿಷ್ಠ 3 ವರ್ಷ ನಿರ೦ತರವಾಗಿ ಮ೦ಡಳಿಯ ಸದಸ್ಯತ್ವವನ್ನು ನವೀಕರಿಸಿ ಫಲಾನುಭವಿಯಾಗಿ ಮು೦ದುವರೆದಿರಬೇಕು
ಫಲಾನುಭವಿ ಸರ್ಕಾರದ ಇತರೆ ಇಲಾಖೆ /ಯೋಜನೆಗಳಲ್ಲಿ ಪಿ೦ಚಣಿ ಸೌಲಭ್ಯ ಪಡೆದಿರಬಾರದು