ನವಲಗುಂದ : ಕಳಸಾ ಬಂಡೂರಿ(ಮಹದಾಯಿ) ಯೋಜನೆಯು ಕೇಂದ್ರದ ಅಂಗಳದಲ್ಲಿದೆ. ಒಂದು ವೇಳೆ ಕೇಂದ್ರ ಪರಿಸರ ಇಲಾಖೆ ಇವತ್ತು ಅನುಮತಿ ನೀಡಿದರೆ, ನಾಳೆನೇ ಅದರ ಕಾಮಗಾರಿಯನ್ನು ಆರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಾನು ‘ಸಿಇ’ಒ ಆಗಿ ಮುಂದುವರಿಯುತ್ತೇನೆ, ನನ್ನ ವಜಾಗೊಳಿಸುವ ವದಂತಿಗಳು ಅಸಮರ್ಪಕ: ಬೈಜು ರವೀಂದ್ರನ್
ನವಲಗುಂದದ ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಗ್ಯಾರಂಟಿ ಕಾರ್ಯಕ್ರಮಗಳ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಕಳಸಾ- ಬಂಡೂರಿ ಯೋಜನಗೆ ಟೆಂಡರ್ ಆಹ್ವಾನಿಸಲಾಗಿದೆ. ಆದರೆ, ಯೋಜನೆಗೆ ಪರಿಸರ ಇಲಾಖೆ ಅನುಮೋದನೆ ನೀಡಬೇಕಿದೆ, ಆ ಕೆಲಸವನ್ನು ಕೇಂದ್ರ ಸರ್ಕಾರದವರು ಮಾಡಬೇಕು. ಕೇಂದ್ರ ಸಚಿವ ಮತ್ತು ಇಲ್ಲಿನ ಸಂಸದ ಪ್ರಲಾಹ ಜೋಶಿ ಏನಪ್ಪಾ ಮಾಡುತ್ತಿದ್ದಿಯಾ ನೀನು?’ ಎಂದು ಅವರು ಪ್ರಶ್ನಿಸಿದರು.
ವ್ಯಕ್ತಿಗೆ ‘ಮಾನ’ ಎಷ್ಟು ಮುಖ್ಯವೋ ‘ರಾಜಕೀಯ’ ಪಕ್ಷಗಳಿಗೂ ಅಷ್ಟೇ ಮುಖ್ಯ : ಹೈಕೋರ್ಟ್
ಗುಜರಾತ್‌ನಿಂದ ತೆರಿಗೆ ವಸೂಲಿ ಮಾಡಬೇಡಿ, ನಾವು ಗುಜರಾತ್‌ನವರು ನಿಮ್ಮನ್ನು ಕೇಂದ್ರವನ್ನು ಕೇಳಲ್ಲ, ನಿಮಗೆ ಕೊಡಲ್ಲ ಎಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಹೇಳಿದ್ದರು. ಈಗ ಪ್ರಧಾನಿಯಾಗಿದ್ದಾರೆ. ನಾವು ತೆರಿಗೆ ಪಾಲು ಕೇಳಿದರೆ ದೇಶ ಒಡೆಯುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಒಂದು ನಾಲಗೆ, ಈಗ ಪ್ರಧಾನಿಯಾದಾಗ ಇನ್ನೊಂದು ನಾಲಗೆ ಈ ರೀತಿಯ ಇಬ್ಬಂದಿ ನಾಲಗೆ ಇರಬಾರದು ಎಂದು ಅವರು ವ್ಯಂಗ್ಯವಾಡಿದರು.
‘ನಿರುದ್ಯೋಗ’ ಭಾರತಕ್ಕೆ ಸಮಸ್ಯೆಯಲ್ಲ : ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ್ ಪನಗಾರಿಯಾ
ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರು ಅನುಮತಿ ಕೊಡಿಸಬೇಕು. ಜೋಶಿ ಅವರನ್ನು ನೀವು ಲೋಕಸಭೆಗೆ ಯಾಕೆ ಆಯ್ಕೆ ಮಾಡುತ್ತೀರಿ? ಅವರು ಕೆಲಸ ಮಾಡಲ್ಲ. ಕರ್ನಾಟಕ ಅಭಿವೃದ್ಧಿ ಬಗ್ಗೆ ಅವರು ತಲೆಕೆಡಿಸಿಕೊಳ್ಳಲ್ಲ. ರಾಜ್ಯದ 25 ಸಂಸದರು ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಧ್ವನಿ ಎತ್ತಿಲ್ಲ ಎಂದು ಕುಟುಕಿದರು.ಹಿಂದೊಮ್ಮೆ ಬಿ.ಎಸ್. ಯಡಿಯೂರಪ್ಪ ಅವರು ಹುಬ್ಬಳ್ಳಿಯಲ್ಲಿ ಭಾಷಣ ಮಾಡಿದ್ದರು. ಗೋವಾ ಮುಖ್ಯಮಂತ್ರಿ ಪತ್ರವನ್ನು ಓದಿದ್ದರು. ಮಹದಾಯಿ ಯೋಜನೆ ಕಾಮಗಾರಿ ಶುರು ಮಾಡುತ್ತೇವೆ ಎಂದು ಹೇಳಿದ್ದರು. ಅವರು ಚುನಾವಣೆಗೋಸ್ಕರ ಏನು ಬೇಕಾದರೂ ಭರವಸೆ ನೀಡುತ್ತಾರೆ ಎಂದು ಗೇಲಿ ಮಾಡಿದರು.