ನವದೆಹಲಿ : ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ವಿಶೇಷ ‘ಮನೆಯಿಂದಲೇ ಕೆಲಸ’ ಯೋಜನೆಯನ್ನು ಪರಿಚಯಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಓಡಾಡುತ್ತಿರುವ ಸುದ್ದಿಯ ಕುರಿತು ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
ವಾಟ್ಸಾಪ್ ಮತ್ತು ಫೇಸ್‌ಬುಕ್’ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುದ್ದಿ ವರದಿಯೊಂದು ವೈರಲ್ ಆಗಿದ್ದು, ಕೇಂದ್ರ ಸರ್ಕಾರವು ಮಹಿಳೆಯರಿಗೆ ಮನೆಯಿಂದಲೇ ಕೆಲಸ ಮಾಡುವ ಮತ್ತು ತಿಂಗಳಿಗೆ ರೂ. 25,000 ಗಳಿಸುವ ಅವಕಾಶವನ್ನು ಒದಗಿಸುತ್ತಿದೆ ಎಂದು ಹೇಳಿಕೊಂಡಿದೆ.
ಆದಾಗ್ಯೂ, ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರವು ಅಧಿಕೃತವಾಗಿ ಅಂತಹ ಯಾವುದೇ ‘ಮನೆಯಿಂದಲೇ ಕೆಲಸ’ ಯೋಜನೆಯನ್ನ ಘೋಷಿಸಿಲ್ಲ ಮತ್ತು ಇದು ಜನರನ್ನು, ವಿಶೇಷವಾಗಿ ಮಹಿಳೆಯರನ್ನು ಆಕರ್ಷಿಸಲು ಮತ್ತು ಅವರ ವೈಯಕ್ತಿಕ ವಿವರಗಳನ್ನ ಸಂಗ್ರಹಿಸಲು ರಚಿಸಲಾದ ನಕಲಿ ಸುದ್ದಿಯಾಗಿದೆ. ಸೈಬರ್ ಅಪರಾಧಿಗಳು ಇಂತಹ ಸುಳ್ಳು ಜಾಹೀರಾತುಗಳ ಮೂಲಕ ಜನರ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುವ ಅಪಾಯವಿದೆ ಎಂದು ಎಚ್ಚರಿಸಿದೆ.
ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಅನಧಿಕೃತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಮತ್ತು ಯಾವುದೇ ನೋಂದಣಿ ಶುಲ್ಕವನ್ನು ಪಾವತಿಸಬೇಡಿ ಎಂದು ಅಧಿಕಾರಿಗಳು ನಾಗರಿಕರಿಗೆ ಸಲಹೆ ನೀಡಿದ್ದಾರೆ. ಯಾವುದೇ ಯೋಜನೆಯ ಬಗ್ಗೆ ಮಾಹಿತಿ ಪಡೆದಾಗ, ಅದು ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳಲ್ಲಿದೆಯೇ ಎಂದು ಪರಿಶೀಲಿಸುವುದು ಮುಖ್ಯ. ನೀವು ಅಂತಹ ಅನುಮಾನಾಸ್ಪದ ಸಂದೇಶಗಳು ಅಥವಾ ನಕಲಿ ಸುದ್ದಿಗಳನ್ನು ಕಂಡರೆ, ನೀವು ತಕ್ಷಣ ಅವುಗಳನ್ನು ಪಿಐಬಿ ಫ್ಯಾಕ್ಟ್ ಚೆಕ್ ಇಲಾಖೆಗೆ ಕಳುಹಿಸಬಹುದು. ಇದಕ್ಕಾಗಿ, ಸರ್ಕಾರವು ವಿಶೇಷ ಇಮೇಲ್ ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್’ಗಳನ್ನು ಲಭ್ಯವಾಗುವಂತೆ ಮಾಡಿದೆ. ನಕಲಿ ಸುದ್ದಿಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದನ್ನು ನಿಲ್ಲಿಸುವ ಮೂಲಕ, ಸಮಾಜದಲ್ಲಿ ನಡೆಯುತ್ತಿರುವ ಆರ್ಥಿಕ ವಂಚನೆಗಳನ್ನು ನಿಗ್ರಹಿಸಬಹುದು ಎಂದು ಸರ್ಕಾರ ಮನವಿ ಮಾಡುತ್ತಿದೆ.
ಮಗನಿಗೆ 4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಲಕ್ಸುರಿ ಕಾರ್ ಗಿಫ್ಟಾಗಿ ನೀಡಿದ ‘ಹಾರ್ದಿಕ್ ಪಾಂಡ್ಯ’, ವಿಡಿಯೋ ವೈರಲ್
Good News ; ಉದ್ಯೋಗಿಗಳಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್ ; ಈಗ ತುರ್ತು ಶಸ್ತ್ರಚಿಕಿತ್ಸೆಗಾಗಿ 10 ಲಕ್ಷ ರೂ. ಲಭ್ಯ.!
“24 ಗಂಟೆಗಳೊಳಗೆ ಕ್ಷಮೆಯಾಚಿಸಿ” : ರಾಹುಲ್ ಗಾಂಧಿಗೆ ಶಿವಸೇನೆ ಎಚ್ಚರಿಕೆ








