ಹಾವೇರಿ : ಈ ಹಿಂದೆ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ವೀಟ್ ವಾರ್ ನಡೆದಿತ್ತು ಈ ವೇಳೆ ಡಿ ಸಿ ಎಂ ಡಿಕೆ ಶಿವಕುಮಾರ್ ಓಲ್ಡ್ ಪವರ್ ಗಿಂತ ವರ್ಡ್ ಪವರ್ ಹೆಚ್ಚು ಎಂದು ಹೇಳಿಕೆ ನೀಡಿದ್ದರು ಇದೀಗ ಹಾವೇರಿಯಲ್ಲಿ ಕೂಡ ಅದೇ ಮಾತನ್ನು ಪುನರುಚ್ಚಿಸಿದ್ದಾರೆ. ಹಾವೇರಿಯ ದೇವಗುಗಿ ಬಳಿ ಇರುವ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು ನಾನು ಹೇಳಿದ್ದೆ , ಆದ್ದರಿಂದ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ವರ್ಲ್ಡ್ ಪವರ್ ಗಿಂತ ವರ್ಡ್ ಪವರ್ ಹೆಚ್ಚು ಹಾಗಾಗಿ ಕೊಟ್ಟ ಮಾತು ಉಳಿಸಿಕೊಳ್ಳುವುದು ಬಹಳ ಮುಖ್ಯ. ರಾಜಕಾರಣದಲ್ಲಿ ಎಷ್ಟು ದಿನ ಇರುತ್ತೇವೆ ಎಂದು ಗೊತ್ತಿಲ್ಲ ಹಾಗಾಗಿ ನುಡಿದಂತೆ ನಡೆಯಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
70 ಮೆಡಿಕಲ್ ಕಾಲೇಜುಗಳಲ್ಲಿ 13,945 ಸೀಟು ಲಭ್ಯವಾಗಿದೆ. ನಮ್ಮ ರಾಜ್ಯದಲ್ಲಿ ಹೆಚ್ಚು ಡಾಕ್ಟರ್ ರೆಡಿಯಾಗುತ್ತಿದ್ದಾರೆ. ನೀವು ನಮ್ಮ ಸರ್ಕಾರಕ್ಕೆ ಆರು ಜನ ಶಾಸಕರ ಕೊಟ್ಟು ಶಕ್ತಿ ತುಂಬಿದ್ದೀರಿ. ಬರಗಾಲದ ಜಿಲ್ಲೆ ಅಂತ ಹೇಳುತ್ತಿದ್ದರು. ಬರಗಾಲ ಓಡಿಸುವ ಕೆಲಸ ಮಾಡಬೇಕು ನಮ್ಮ ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡಿ ಬೊಮ್ಮಾಯಿ ಸಹಕಾರದೊಂದಿಗೆ ಮೆಡಿಕಲ್ ಕಾಲೇಜು ಉದ್ಘಾಟನೆಯಾಗಿದೆ ಎಂದು ತಿಳಿಸಿದರು.








