ಬೆಂಗಳೂರು : ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಆಗಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.ಯಡಿಯೂರಪ್ಪ ಕುಟುಂಬ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಿ ಆಗೋವರೆಗೂ ನಾನು ಬಿಜೆಪಿಗೆ ವಾಪಸ್ ಆಗಲ್ಲ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶಪಥ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್‌ರನ್ನ ವಾಪಸ್ ಬಿಜೆಪಿಗೆ ತರಲು ರಮೇಶ್ ಜಾರಕಿಹೊಳಿ ಫಡ್ನವಿಸ್ ಜೊತೆ ಮಾತುಕತೆ ಮಾಡಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ಕೃಷ್ಣ ಮತ್ತು ಭೀಮಾ ನದಿಗೆ ನೀರು ಬಿಡುವಂತೆ ಫಡ್ನವಿಸ್ ಭೇಟಿಯಾಗಿದ್ದು. ನನ್ನ ಸಲುವಾಗಿ ಚರ್ಚೆ ಮಾಡೋದು ಅವಶ್ಯಕತೆ ಇಲ್ಲ. ಯಾಕೆಂದರೆ 6 ವರ್ಷ ಹೊರಗೆ ಹಾಕಿದ್ದಾರೆ. ಯಡಿಯೂರಪ್ಪ ಕುಟುಂಬ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಿಯಾಗುವವರೆಗೆ ನಾನು ಬಿಜೆಪಿಗೆ ಹೋಗಲ್ಲ ಎಂದರು.
ಇನ್ನು ಹೊಸ ಪಕ್ಷ ಕಟ್ಟುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ್ ಅವರು, ಹೊಸ ಪಕ್ಷ ಕಟ್ಟುತ್ತೇವೆ ಅಂತ ಯಾರು ಹೇಳಿದ್ರು? ನಾವು ಮೊದಲು ಸರ್ವೆ ಮಾಡುತ್ತೇವೆ. ಈ ಕೆಟ್ಟ ಯಡಿಯೂರಪ್ಪ ಕುಟುಂಬಕ್ಕೆ ಬಿಜೆಪಿ ಮುಂದುವರೆಸಿದರೆ ಹೊಸ ಪಕ್ಷದ ಬಗ್ಗೆ ಚಿಂತನೆ ಮಾಡುತ್ತೇವೆ. ಈ ಕೆಟ್ಟ ಕುಟುಂಬ ತೆಗೆದರೆ ಮಾತ್ರ ಬಿಜೆಪಿಗೆ ಕರ್ನಾಟಕದಲ್ಲಿ ಭವಿಷ್ಯ ಇದೆ ಎಂದು ಆರೋಪಿಸಿದರು.
ಭ್ರಷ್ಟಾಚಾರದಲ್ಲಿ ಇವರೇ ಇದ್ದಾರೆ. ಕರೋನಾ, ಡಿ ನೋಟಿಫಿಕೇಶನ್ ಹಗರಣ ಇದೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಾತಾಡೋಕೆ ಇವರಿಗೇನು ನೈತಿಕತೆ ಇದೆ. ನಮ್ಮ ಭಿಕ್ಷೆಯಿಂದ ಎಂಎಲ್‌ಎ ಆಗಿರೋದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಜಯೇಂದ್ರ ಚೇಲಾಗಳು ಯತ್ನಾಳ್ ರಾಜೀನಾಮೆ ಕೊಡಬೇಕು ಅಂತ ಹೇಳುತ್ತಾರೆ. ಮೊದಲು ವಿಜಯೇಂದ್ರ ರಾಜೀನಾಮೆ ಕೊಡಬೇಕು ಎಂದರು.
ಡಿಕೆಶಿ ಕೊಟ್ಟ ಭಿಕ್ಷೆಯಿಂದ ಶಾಸಕ ಆಗಿರೋದು. ಮೊದಲು ವಿಜಯೇಂದ್ರ ರಾಜೀನಾಮೆ ಕೊಟ್ಟು ಶಿಕಾರಿಪುರದಿಂದ ಆರಿಸಿ ಬರಲಿ. ವಿಜಯೇಂದ್ರ ಚೇಲಾಗಳ ಕೈಯಲ್ಲಿ ಹೇಳಿಸೋದು ಬಿಟ್ಟು ಧಮ್ ಇದ್ದರೆ ನನ್ನ ಎದುರಿಗೆ ವಿಜಯೇಂದ್ರ ಮಾತಾಡಲಿ. 4 ಚೇಲಾಗಳನ್ನ ಇಟ್ಟುಕೊಂಡು ಹಂದಿಗಳಿಂದ ಮಾತಾಡಿಸಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಕಿಡಿಕಾರಿದರು.