ಶಿವಮೊಗ್ಗ : ಮಹಿಳೆಯರಿಗೆ ತಮ್ಮ ಹಕ್ಕುಗಳ ಕುರಿತು ಅರಿವು ಮೂಡಿಸಲು ಕಾಲಕಾಲಕ್ಕೆ ಕಾರ್ಯಾಗಾರಗಳನ್ನು ನಡೆಸುವ ಅಗತ್ಯವಿದೆ. ಎಷ್ಟೆ ತಿಳಿದುಕೊಂಡಿದ್ದರೂ ಇನ್ನಷ್ಟು ತಿಳಿದುಕೊಳ್ಳಬೇಕಾದ ವಿಷಯ ಇರುತ್ತದೆ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಂದು ಶಿವಮೊಗ್ಗದ ಸಾಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಆಯೋಜಿಸಿದ್ದಂತ ಮಹಿಳಾ ವಿಚಾರ ಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅನುಷ್ಟಾನಕ್ಕೆ ಬಂದ ಮೇಲೆ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಶಕ್ತರಾಗಲು ಸಾಧ್ಯವಾಗಿದೆ. ಜೊತೆಗೆ ದೈನಂದಿನ ವ್ಯವಹಾರದ ಬಗ್ಗೆ ಅರಿವು ಹೊಂದುವಂತೆ ಆಗಿದೆ. ಮಹಿಳೆಯರಿಗೆ ಇಂತಹ ಕಾರ್ಯಗಾರ ಮೂಲಕ ಇನ್ನಷ್ಟು ಅರಿವು ಮೂಡಿಸುತ್ತಿರೋದು ಶ್ಲಾಘನೀಯವೇ ಸರಿ ಎಂದರು.

ಧರ್ಮಸ್ಥಳ ಸಂಘವು ಮಹಿಳೆಯರ ಜೀವನಶೈಲಿಯನ್ನೇ ಬದಲಾಯಿಸಿದೆ. ಹಿಂದೆ ನೀವು ಕಷ್ಟಪಟ್ಟಿದ್ದಕ್ಕೆ ಇಂದು ಫಲ ಸಿಕ್ಕಿದೆ. ಗಂಡನಿoದ ಆಗುತ್ತಿದ್ದ ಶೋಷಣೆ ಸಹ ತಪ್ಪಿದೆ. ಬಹಳಷ್ಟು ಕುಟುಂಬ ನಿರಾಳವಾಗಿ ಬದುಕೋದಕ್ಕೆ ಮದ್ಯವರ್ಜನ ಶಿಬಿರ ಕಾರಣವಾಗಿದೆ. ಪ್ರತಿವರ್ಷ 13 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ ಎಂದರೆ ಸಂಸ್ಥೆಯ ಆರ್ಥಿಕ ಶಕ್ತಿ ಅರ್ಥವಾಗುತ್ತದೆ. ಆರೋಗ್ಯ ಶಿಬಿರ, ಕೆರೆಗಳ ಕಾಯಕಲ್ಪ, ಮಕ್ಕಳಿಗೆ ಶೈಕ್ಷಣಿಕ ನೆರವು ಕಲ್ಪಿಸುವುದು ಸೇರಿದಂತೆ ಭಕ್ತಿಯ ಮೂಲಕ ಜನರನ್ನು ಆರ್ಥಿಕ ಅಭಿವೃದ್ದಿ ಕೊಡಿಸುವ ಕೆಲಸ ಯೋಜನೆ ಮಾಡುತ್ತಿದೆ ಎಂದು ತಿಳಿಸಿದರು.
ಧರ್ಮಸ್ಥಳದ ಬಗ್ಗೆ ಒಂದಿಷ್ಟು ದುಷ್ಟ ಶಕ್ತಿಗಳು ಕೆಲಸ ಮಾಡಿದವು. ಆದರೇ ಅವರ ಕಾರ್ಯ ಸಾಧುವಾಗಲಿಲ್ಲ. ನೂರಾರು ಬುರುಡೆ ಇದೆ ಅಂತ ಹೇಳಿದ ತಕ್ಷಣ ಕೋರ್ಟ್ ಕೂಡ ತನಿಖೆಗೆ ಆದೇಶಿಸಿತು. ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿತು. ಸರ್ಕಾರದ ನಡೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಕೂಡ ಸ್ವಾಗತಿಸಿದರು. ಆದರೇ ಧರ್ಮಸ್ಥಳದ ಹೆಸರು ಹಾಳು ಮಾಡೋದಕ್ಕೆ ಪ್ರಯತ್ನಿಸಿದ ಪ್ರಯತ್ನ ಮಾತ್ರ ಫಲಿಸಲಿಲ್ಲ ಎಂದರು.

ನಾನು ಪದ್ಮ ಭೂಷಣ ನೀಡಬೇಕು ಎಂಬುದಾಗಿ ಸರ್ಕಾರಕ್ಕೆ ಆಗ್ರಸಿದೆ. ಅವರಲ್ಲಿ ಡಾ.ವೀರೇಂದ್ರ ಹೆಗಡೆ ಅವರು ಒಬ್ಬರಾಗಿದ್ದರು. ಜೊತೆಗೆ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮೀಜಿ. ಆದರೇ ಕೇಂದ್ರ ಸರ್ಕಾರ ಇಬ್ಬರಿಗೂ ಪದ್ಮಭೂಷಣ ಪ್ರಶಸ್ತಿ ನೀಡಿದೆ. ಅದು ತಮಗೆ ಹರ್ಷವನ್ನು ತಂದಿರುವುದಾಗಿ ಹೇಳಿದರು.
ಧರ್ಮಸ್ಥಳ ಸಂಘದಿಂದ ಇಂದು ಹೆಣ್ಣು ಮಕ್ಕಳ ಬದುಕೇ ಬದಲಾಗಿದೆ. ಸುಲಭವಾಗಿ ಸಾಲಸೌಲಭ್ಯ ಸಿಗುವಂತೆ ಆಗಿದೆ. ಅದೇ ಬ್ಯಾಂಕ್ ಗಳಿಗೆ ಹೋದ್ರೆ ಆ ದಾಖಲೆ, ಈ ದಾಖಲೆ ಅಂತ ಕೇಳುತ್ತಾರೆ. ಇಲ್ಲಿ ಸುಲಭವಾಗಿ ಸಿಗುತ್ತದೆ. ಮಹಿಳೆಯರು ಯಾರೂ ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡಬಾರದು ಎಂಬುದಾಗಿ ತಿಳಿಸಿದರು.
ಈ ಸಾಗರ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯ ವೇದಿಕೆಯಲ್ಲಿ ನಗಸಭೆ ನಿಕಟಪೂರ್ವ ಅಧ್ಯಕ್ಷೆ ಮೈತ್ರಿ ಪಾಟೀಲ್, ಶಿರಸಿ ವಿಭಾಗದ ಜಿಲ್ಲಾ ನಿರ್ದೇಶಕ ದಿನೇಶ್ ಎಂ., ರೂಪ ರಮೇಶ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯೆ ಕಸ್ತೂರಿ ಸಾಗರ್, ನಗರಸಭೆ ಮಾಜಿ ಅಧ್ಯಕ್ಷೆ ಮಧುರಾ ಶಿವಾನಂದ್, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಹ ಶಿಕ್ಷಕಿ ಸವಿತಾ ಎಂ. ಇನ್ನಿತರರು ಹಾಜರಿದ್ದರು. ಲೀಲಾವತಿ ಪ್ರಾರ್ಥಿಸಿದರು. ದಯಾನಂದ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಗೌರಮ್ಮ ಪ್ರಾಸ್ತಾವಿಕ ಮಾತನಾಡಿದರು.

ಹೀಗಿದೆ ಧರ್ಮಸ್ಥಳ ಸಂಘದ ಸಾಗರ ತಾಲ್ಲೂಕು ಸಾಧನಾ ವರದಿ
ಸಾಗರ ತಾಲ್ಲೂಕಿನಲ್ಲಿ ಧರ್ಮಸ್ಥಳ ಸಂಘದಡಿ ಸಕ್ರೀಯ ಸ್ವ ಸಹಾಯ ಸಂಘಗಳ ಸಂಖ್ಯೆ 2,576 ಆಗಿದ್ದರೇ, ಸದಸ್ಯರ ಸಂಖ್ಯೆ 19,600 ಆಗಿದೆ. ಸದಸ್ಯರ ಉಳಿತಾಯ 1,62,27,000. ಪ್ರಸ್ತುತ ವರ್ಷದ್ದಿ ಆರೋಗ್ಯ ವಿಮೆಯಡಿ 620 ಮಂದಿ ಕ್ಲೈಂ ಮಾಡಿಕೊಂಡಿದ್ದಾರೆ. ಇದಕ್ಕಾಗಿ 1,71,08,564 ಹಣವನ್ನು ಪಾವತಿಸಲಾಗಿದೆ. 14 ವ್ಯಸನ ಮುಕ್ತ ಶಿಬಿರವನ್ನು ನಡೆಸಿದ್ದರೇ, ಇದರಿಂದಾಗಿ 1,214 ಮಂದಿ ವ್ಯಸನ ಮುಕ್ತರಾಗಿದ್ದಾರೆ. ಧರ್ಮಸ್ಥಳ ಸಂಘದಿಂದ 101 ಮಂದಿ ಮಾಶಾಸನ ಪಡೆಯುತ್ತಿದ್ದಾರೆ. ಇದಕ್ಕಾಗಿ ಪ್ರತಿ ತಿಂಗಳು 1,10,000 ಪಾವತಿಸಲಾಗುತ್ತಿದೆ.
ಸಮುದಾಯ ಕಾರ್ಯಕ್ರಮದ ಅಡಿಯಲ್ಲಿ 2.50 ಲಕ್ಷದಲ್ಲಿ ಹಿಂದೂ ರುದ್ರಭೂಮಿಯನ್ನು ನಿರ್ಮಿಸಿದ್ದರೇ, ಶಿಕ್ಷಕರ ಕೊರತೆ ಇರುವಂತ ಸರ್ಕಾರಿ ಶಾಲೆಗಳಿಗೆ ಧರ್ಮಸ್ಥಳ ಸಂಘದಿಂದ ಸಾಗರ ತಾಲ್ಲೂಕಿನಲ್ಲಿ 20 ಶಿಕ್ಷಕರನ್ನು ನೇಮಿಸಲಾಗಿದೆ. ಒಟ್ಟು 2.85 ಲಕ್ಷ ಜ್ಞಾನದೀಪ ಶಿಕ್ಷಕರ ಗೌರವಧನ ನೀಡಲಾಗುತ್ತಿದೆ. 13 ಹಾಲು ಉತ್ಪಾಕರ ಸಂಘದ ಕಟ್ಟಡವನ್ನು 4.88 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿಕೊಡಲಾಗಿದೆ. ಜನಮಂಗಲ ಅಂಗವೈಕಲ್ಯ ಸಲಕರಣೆಯನ್ನು 178 ಮಂದಿಗೆ 6.25 ಲಕ್ಷ ವೆಚ್ಚದಲ್ಲಿ ವಿತರಿಸಲಾಗಿದೆ. ಈವರೆಗೆ ಸಾಗರ ತಾಲ್ಲೂಕಿನಲ್ಲಿ ಬರೋಬ್ಬರಿ 197 ದೇವಸ್ಥಾನಗಳನ್ನು 1.94 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು..
ನಿವೃತ್ತರಾಗಲಿರುವ ವಾಲ್ಮಾರ್ಟ್ ಸಿಇಒ, ಪ್ರತಿ 30 ನಿಮಿಷಕ್ಕೆ 1.4 ಲಕ್ಷ ರೂಪಾಯಿ ಸಂಪಾದನೆ
BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: 2026ನೇ ಸಾಲಿನ ‘ಗಳಿಕೆ ರಜೆ ಅಧ್ಯರ್ಪಿಸಿ ನಗದೀಕರಣ’ಕ್ಕೆ ಆದೇಶ








