ಬೆಳಗಾವಿ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡಬೇಕೆಂದು ಕೋಲಾರ ಕ್ಷೇತ್ರದ ಮಹಿಳಾ ಮುಖಂಡರು ಒತ್ತಾಯ ಮಾಡಿದ್ದಾರೆ.
ಬೆಳಗಾವಿಯ ಸುವರ್ಣಸೌಧಕ್ಕೆ ನಿಯೋಗದಲ್ಲಿ ಆಗಮಿಸಿದ ಮಹಿಳೆಯರ ಗುಂಪು, ಕೋಲಾರಕ್ಕೆ ಬರಬೇಕು ಎಂದು ಒತ್ತಡ ಹಾಕಿತು.
ವರುಣದಲ್ಲಿ ಕಳೆದ ವಾರ ಸುತ್ತವರಿದ ಸಿದ್ದರಾಮಯ್ಯ ಅಲ್ಲಿಂದಲೇ ಸ್ಪರ್ಧೆ ಮಾಡುವ ಸುಳಿವು ನೀಡಿದ್ದರು. ಹೀಗಾಗಿ ಬೆಳಗಾವಿ ಆಗಮಿಸಿದ ಕೋಲಾರ ತಂಡ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
ಇತ್ತ, ಸಿದ್ದರಾಮಯ್ಯನವರು ವರುಣಾ ಅಥವಾ ಕೋಲಾರದಲ್ಲಿ ಸ್ಪರ್ಧೆ ಮಾಡುವುದು ಖಚಿತ ಆಗುತ್ತಿದ್ದಂತೆ, ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಒತ್ತಡ ಹೆಚ್ಚಾಗುತ್ತದೆ. ಬಾದಾಮಿಯು ಮೈಸೂರು ಹಾಗೂ ಬೆಂಗಳೂರನಿಂದ ದೂರ ಆಗುತ್ತಿದೆ. ಬಾದಾಮಿಗೆ ಬರುವುದಕ್ಕೆ ಆಗುವುದಿಲ್ಲ. ಕ್ಷೇತ್ರದ ಜನತೆಯ ಸಮಸ್ಯೆ ಆಲಿಸಲು ಆಗುವುದಿಲ್ಲ ಎಂದು ಇತ್ತೀಚಿಗೆ ಸಿದ್ದರಾಮಯ್ಯನವರು ಹೇಳುವ ಮೂಲಕ ಬಾದಾಮಿಯಿಂದ ಸ್ಪರ್ಧೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದರು.