ಶಿವಮೊಗ್ಗ: ಮಹಿಳೆಯರು ಮನೆ ಕೆಲಸದ ಜೊತೆ ಸಮಾಜದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾದರಿ ಬದುಕು ನಡೆಸುತ್ತಿರುವುದು ಲಾಗಾಯ್ತಿನಿಂದ ನಡೆದುಕೊಂಡು ಬಂದಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸಾಗರ ಹೋಟೆಲ್ ವೃತ್ತದಲ್ಲಿ ಸ್ನೇಹ ಸಾಗರ ಸ್ವಸಹಾಯ ಮಂಡಳಿ ವತಿಯಿಂದ ಸಂಸ್ಥೆಯ 25ನೇ ವರ್ಷದ ಅಂಗವಾಗಿ ಹಮ್ಮಿಕೊಳ್ಳಳಾಗಿದ್ದ ಮ್ಯಾರಥಾನ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಮಹಿಳೆಯರು ಸಮಾಜದ ಸ್ಪೂರ್ತಿಯಾಗಿರುತ್ತಾರೆ. ಕುಟುಂಬ ನಿರ್ವಹಣೆ ಸಮರ್ಥವಾಗಿ ನಿಭಾಯಿಸುವ ಜೊತೆಗೆ ಸಮಾಜಮುಖಿಯಾಗಿ ಯೋಚಿಸುವ ಶಕ್ತಿ ಮಹಿಳೆಯಲ್ಲಿ ಇರುತ್ತದೆ ಎಂದರು.
ಸ್ನೇಹಸಾಗರ ಮಹಿಳಾ ಡೊಳ್ಳು ತಂಡವನ್ನು ಕಟ್ಟಿ ಸುಮಾರು 25 ದೇಶಗಳಲ್ಲಿ ಡೊಳ್ಳು ಪ್ರದರ್ಶನ ನೀಡಿದ ಚೂಡಾಮಣಿ ರಾಮಚಂದ್ರ ಅವರ ಸಾಧನೆ ಅನುಕರಣೀಯವಾದದ್ದು. ಸಾಗರದಲ್ಲಿ ಸುಸಜ್ಜಿತವಾದ ಈಜುಕೊಳ ನಿರ್ಮಿಸಲಾಗಿದ್ದು ಮಹಿಳೆಯರು ಈಜು ಕಲಿಯುವುದಾದರೆ ನುರಿತ ಮಹಿಳಾ ಕೋಚ್ ನೇಮಿಸಲಾಗುತ್ತದೆ. ಸಾಗರದಲ್ಲಿ ಜಿಲ್ಲಾಮಟ್ಟದ ಮಹಿಳೆಯರ ಈಜು ಸ್ಪರ್ಧೆ ನಡೆಸಲು ಅಗತ್ಯ ಸಹಕಾರ ನೀಡುವುದಾಗಿ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡಳಿ ಅಧ್ಯಕ್ಷೆ ಚೂಡಾಮಣಿ ರಾಮಚಂದ್ರ, ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು ಸಂತೋಷ ತರುತ್ತದೆ. ಮಹಿಳೆಯರ ಕ್ರಿಯಾಶೀಲತೆ ಹೆಚ್ಚಿಸಲು ಇಂತಹ ಸ್ಪರ್ಧಾ ಕಾರ್ಯಕ್ರಮ ಕಳೆದ 25 ವರ್ಷಗಳಿಂದ ಸ್ನೇಹಸಾಗರ ಮಹಿಳಾ ಮಂಡಳಿ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಈ ವೇದಿಕೆಯಲ್ಲಿ ಸಾಗರ ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಅರುಣಕುಮಾರ್, ಡಾ. ಶ್ರೀಪಾದ, ಎಲ್.ಚಂದ್ರಪ್ಪ, ಲಲಿತಮ್ಮ, ನಂದಾ ಗೊಜನೂರು ಇನ್ನಿತರರು ಹಾಜರಿದ್ದರು.

ವಿಜೇತರ ವಿವರ
35ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಹೇಮಲತಾ (ಪ್ರಥಮ), ಸುಮನ ಎಸ್.ವಿ. (ದ್ವಿತೀಯ), ಶ್ರೀಲತಾ (ತೃತೀಯ), 35ವರ್ಷದೊಳಗಿನ ವಿಭಾಗಲ್ಲಿ ಕಾವ್ಯ ಕೆ.ಸಿ. ಜಂಬಾನಿ (ಪ್ರಥಮ), ಸುಮಂಗಲ (ದ್ವಿತೀಯ), ಮೆರೋಜ್ (ತೃತೀಯ) ಬಹುಮಾನ ಪಡೆದರೇ 93 ವರ್ಷದ ಇಂದಿರಾಬಾಯಿ, 88 ವರ್ಷದ ಪ್ರಭಾವತಿ ಮ್ಯಾರಥಾನ್ ಗುರಿ ಪೂರೈಸಿದ ಹಿನ್ನೆಲೆಯಲ್ಲಿ ಶಾಸಕರಿಂದ ವಿಶೇಷ ಬಹುಮಾನ ಪಡೆದರು.
ರಾಜ್ಯದ IT-BT ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ.90ರಷ್ಟು ಉದ್ಯೋಗ ಕಡ್ಡಾಯಗೊಳಿಸಿ: ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯ
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ಫಲಿತಾಂಶ ಪ್ರಕಟ: ಜಾರಕಿಹೊಳಿ ಟೀಂಗೆ ಸ್ಪಷ್ಟ ಬಹುಮತ








