ಬಳ್ಳಾರಿ : ರಾಜ್ಯ ಸರ್ಕಾರವು ರಾಜ್ಯದ ಎಲ್ಲ ಬಡ ಕುಟುಂಬಗಳ ಮನೆಯ ಯಜಮಾನಿಗೆ ಮಾಸಿಕ 2000 ರೂಪಾಯಿ ಸಹಾಯಧನ ನೀಡುವ ಗೃಹಲಕ್ಷಿö್ಮ ಯೋಜನೆಯನ್ನು ಜಾರಿಗೆ ತಂದು, ಸಂಕಷ್ಟದಲ್ಲಿದ್ದವರಿಗೆ ನೆರವಾಗುವುದು, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಯೋಜನೆಯ ಆಶಯವಾಗಿದ್ದು, ಮಹಿಳಾ ಕೂಲಿ ಕಾರ್ಮಿಕರು, ಬಡ ಕುಟುಂಬದ ಮಹಿಳೆಯರಿಗೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿಯೋಜನೆಯು ಆಸರೆಯಾಗಿದೆ.
ಮಕ್ಕಳ ಶಾಲೆ ಶುಲ್ಕ, ವೈದ್ಯಕೀಯ ಖರ್ಚು, ದಿನಸಿ ಖರೀದಿ ಹೀಗೆ ನಾನಾ ರೀತಿಯಲ್ಲಿ ಗೃಹಲಕ್ಷಿö್ಮ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ನೀಡುವ ರೂ.2000 ಸದ್ಬಳಕೆಯಾಗುತ್ತಿದೆ. ಇದರೊಂದಿಗೆ ಕೆಲ ಮಹಿಳೆಯರು ಸ್ವಂತ ವ್ಯಾಪಾರ, ಹೊಲಿಗೆ ಯಂತ್ರ ಖರೀದಿ, ಬಳೆ ಅಂಗಡಿ ವ್ಯಾಪಾರ, ಬ್ಯೂಟಿ ಪಾರ್ಲರ್ ಆರಂಭಿಸಿ ಗೃಹಲಕ್ಷಿö್ಮ ಯೋಜನೆಯ ಸದುಯೋಗ ಪಡೆದುಕೊಂಡಿದ್ದಾರೆ.
ಗೃಹಲಕ್ಷ್ಮಿ ಹಣದಿಂದ ಬಳೆ ಅಂಗಡಿ ಪ್ರಾರಂಭಿಸಿದ ಮಹಿಳೆ:
ಸಂಡೂರು ತಾಲ್ಲೂಕಿನ ಹೊಸ ದರೋಜಿ ಗ್ರಾಮದ ನಿವಾಸಿಯಾದ ಲಕ್ಷಿö್ಮ ಅವರು ತಮ್ಮ ಕಷ್ಟಕರ ಜೀವನದಲ್ಲಿ ಸಣ್ಣ ವ್ಯಾಪಾರ ಆರಂಭಿಸಬೇಕೆAಬ ಆಸೆ ಗೃಹಲಕ್ಷಿö್ಮ ಯೋಜನೆಯು ಈಡೇರಿಸಿದ್ದು, ವ್ಯಾಪಾರವು ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ನೆರವಾಗಿದೆ. ಕುಟುಂಬದ ನಿರ್ವಹಣೆಗಾಗಿ ಬಳೆ ಅಂಗಡಿಯನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದು, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ವ್ಯಾಪಾರವು ತುಂಬಾ ಅನುಕೂಲಕರವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೊಲಿಗೆಯಂತ್ರ ಖರೀದಿ:
ಕುರುಗೋಡು ಪಟ್ಟಣದ ನಿವಾಸಿ ಭಾಗ್ಯಶ್ರೀ ಅವರು, ಏನಾದರೂ ಉದ್ಯೋಗ ಮಾಡಿ ಹಣ ಸಂಪಾದನೆ ಮಾಡಬೇಕು, ನನ್ನ ವೈಯಕ್ತಿಕ ಖರ್ಚು, ಮಕ್ಕಳ ವಿದ್ಯಾಭ್ಯಾಸ, ಬಟ್ಟೆ, ಪುಸ್ತಕ, ಕುಟುಂಬ ನಿರ್ವಹಣೆ ಸೇರಿದಂತೆ ಗಂಡನಿಗೆ ಹೆಗಲಾಗಿ ನಾನೂ ನಿಲ್ಲಬೇಕೆಂಬ ಅವರ ಹಂಬಲ ಹೊಂದಿದ್ದರು. ಟೈಲರಿಂಗ್ ತರಬೇತಿ ಪಡೆದುಕೊಂಡಿದ್ದ ಅವರು, ಗೃಹಲಕ್ಷಿö್ಮ ಹಣದಿಂದ ಕಳೆದ ಅಕ್ಟೋಬರ್ ತಿಂಗಳಲ್ಲಿ ಟೈಲರಿಂಗ್ ಮಿಷನ್ ಖರೀದಿ ಮಾಡಿದ್ದಾರೆ.
‘ಪ್ರತಿದಿನ ಕುಟುಂಬ, ಲಾಲನೆ-ಪಾಲನೆಯ ಜೊತೆಗೆ ಉಳಿದ ಸಮಯದಲ್ಲಿ ಪ್ರತಿದಿನ ಬಟ್ಟೆ ಹೊಲೆಯುವುದು, ಜಿಗ್-ಜಾಗ್ ಮಾಡುವುದು, ಸೀರೆಗಳಿಗೆ ಕುಚ್ಚು ಹಾಕುವುದು ಸೇರಿದಂತೆ ಇನ್ನಿತರೆ ಚಟುವಟಿಕೆ ಮಾಡುತ್ತಾ, ದಿನಕ್ಕೆ ಕನಿಷ್ಠ ರೂ.300 ರಿಂದ 500/-ಗಳ ಸಂಪಾದನೆ ಮಾಡುತ್ತಿದ್ದೇನೆ. ನನ್ನ ಜೀವನದಲ್ಲಿ ವರದಾನವಾಗಿ ಮತ್ತು ದಿವೀಗೆಯಾಗಿ ಬಂದ ‘ಗೃಹಲಕ್ಷಿö್ಮ’ ಜಾರಿಗೆಗೊಳಿಸಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಬ್ಯೂಟಿ ಪಾರ್ಲರ್ ಕನಸು ನನಸು:
ಕುರುಗೋಡು ಪಟ್ಟಣದ ನಿವಾಸಿಯಾದ ಜೀವಿತಾ ಅವರು, ಬ್ಯೂಟಿಷಿಯನ್ ತರಬೇತಿ ಹೊಂದಿದ್ದರು. ಬ್ಯೂಟಿಪಾರ್ಲರ್ ಆರಂಭಿಸಬೇಕೆAಬ ಹಂಬಲ ತುಂಬಾ ಇತ್ತು. ಅದರೆ ಹಣದ ಕೊರತೆಯಿಂದ ಕನಸು ಕಮರಿತ್ತು. ಗೃಹಲಕ್ಷಿö್ಮ ಯೋಜನೆಯು ಜೀವಕಳೆ ತುಂಬಿದ್ದು, ಸದ್ಯ ಮಕ್ಕಳ ವಿಧ್ಯಾಬ್ಯಾಸ, ಬಟ್ಟೆ, ಪುಸ್ತಕ ಕುಟುಂಬ ನಿರ್ವಹಣೆ ಸೇರಿದಂತೆ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
‘ಇಲ್ಲಿಯವರೆಗೆ ಗೃಹಲಕ್ಷಿö್ಮ ಹಣದಿಂದ ಒಟ್ಟು ರೂ.30 ಸಾವಿರ ಪಡೆದಿದ್ದು, ಈ ಹಣವನ್ನೆ ನಾನು ಬಂಡವಾಳವಾಗಿ ಬಳಿಸಿಕೊಂಡು, ಟಚ್ ಆಂಡ್ ಗ್ಲೋ ಎಂಬ ಹೆಸರಿನಲ್ಲಿ ಸ್ವಂತ ಬ್ಯೂಟಿಪಾರ್ಲರ್ ತೆರೆದಿದ್ದೇನೆ. ಉತ್ತಮ ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ನನ್ನ ಕನಸನ್ನು ನನಸು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದು ಹೇಳುತ್ತಾರೆ ಜೀವಿತಾ ಅವರು.
ಹೊಲಿಗೆಯಂತ್ರ ಖರೀದಿಸಿ ಸಂತಸಪಟ್ಟ ಮಹಿಳೆ:
ಸಂಡೂರು ತಾಲ್ಲೂಕಿನ ವಿಠಲಾಪುರ ಗ್ರಾಮದ ನಿವಾಸಿಯಾದ ಸಾವಿತ್ರಿ ಅವರು ಪ್ರತಿ ತಿಂಗಳು ಬರುತ್ತಿದ್ದ ಗೃಹಲಕ್ಷಿ ಯೋಜನೆಯ 2000 ಸಾವಿರ ರೂ.ಗಳನ್ನು ಕೂಡಿಸಿಟ್ಟುಕೊಂಡು, ಸ್ವಂತಕ್ಕೆ ಹೊಲಿಗೆ ಯಂತ್ರ ಖರೀದಿಸಿದ್ದು, ಮನೆಯ ಬದುಕಿಗೆ ದಾರಿದೀಪವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಕುಟುಂಬಗಳಿಗೆ ಮುಖ್ಯ ಆಧಾರ ಸ್ತಂಭವಾಗಿದ್ದು, ಬಡ ಕುಟುಂಬದ ನಿರ್ವಹಣೆಗಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ರಾಜ್ಯ ಸರ್ಕಾರವು ಗೃಹಲಕ್ಷಿö್ಮ ಯೋಜನೆಯನ್ನು ಅನುಷ್ಠಾನಗೊಳಿಸಿ ಮಹಿಳೆಯರನ್ನು ಇನ್ನಷ್ಟು ಬಲಿಷ್ಠಗೊಳಿಸಿದೆ.
ಬಡತನದ ಬೇಗೆಯಲ್ಲಿ ನೊಂದಿರುವAತಹ ಮಹಿಳೆಯರಿಗೆ ಮತ್ತು ಒಂದಿಲ್ಲ ಒಂದು ರೀತಿಯಲ್ಲಿ ಕುಟುಂಬದ ಸದಸ್ಯರ ಆರ್ಥಿಕ ಹೊರೆ ಸರಿತೂಗಿಸಲು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷಿö್ಮ ಯೋಜನೆಯು ತುಂಬಾ ಅನುಕೂಲವಾಗಿದೆ ಎಂದು ಹೇಳುತ್ತಿದ್ದಾರೆ ಸೌಲಭ್ಯ ಪಡೆಯುತ್ತಿರುವ ಮಹಿಳೆಯರು.