ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮಹಿಳೆಯರೇ ನಿಮ್ಮ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸೋದು ಅತ್ಯಗತ್ಯವಾಗಿದೆ . ಅದರಲ್ಲೂ ಮದುವೆಯಾದ ಬಳಿಕ ಮಕ್ಕಳು ಬೇಡವೆಂದು ಎಗ್ಗಿಲ್ಲದೇ ಗರ್ಭನಿರೋಧಕ ಮಾತ್ರೆ ಸೇವನೆ ಮಾಡುತ್ತೀರಾ? ಅಪ್ಪಿತಪ್ಪಿಯೂ ಇಂತಹ ಅಭ್ಯಾಸವನ್ನೂ ರೂಢಿಸಿಕೊಳ್ಳಬೇಡಿ.
BIG BREAKING NEWS: ಮಾಜಿ ಶಾಸಕ ಎಸ್ ಕೆ ಬಸವರಾಜನ್, ಪತ್ನಿ ಸೌಭಾಗ್ಯಗೆ ಜಾಮೀನು
ಲೈಂಗಿಕ ಕ್ರಿಯೆಯ ಬಳಿಕ ಗರ್ಭಧರಿಸುವ ಆತಂಕ ಮಹಿಳೆಯರಿಗೆ ಸಹಜವಾಗಿಯೇ ಕಾಡುತ್ತದೆ. ಅಂತಹ ಸಂದರ್ಭಗಳಲ್ಲಿ ಅನೇಕರು ತುರ್ತು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಪದೇ ಪದೇ ಮಾತ್ರೆ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುತ್ತದೆ. ಹಾಗಾದರೆ ಗರ್ಭನಿರೋಧಕ ಮಾತ್ರೆಗಳನ್ನು ತೆಗದುಕೊಳ್ಳುವುದರಿಂದ ಏನೆಲ್ಲಾ ಅಡ್ಡ ಪರಿಣಾಮವಾಗುತ್ತದೆ ಎನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ
* ಲೈಂಗಿಕ ಸಂಪರ್ಕ ನಡೆದಾಗ ಅದು ಅಂಡೋತ್ತಿಯ ದಿನಗಳು ಅಥವಾ ಅದರ ಹತ್ತಿರದ ದಿನಗಳಾಗಿದ್ದರೆ ಅಂತಹ ಸಂದರ್ಭದಲ್ಲಿ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ನೆನಪಿಡಿ ಲೈಂಗಿಕ ಸಂಪರ್ಕದ ನಂತರ 72 ಗಂಟೆಯೊಳಗೆ ಈ ತುರ್ತು ಗರ್ಭನಿರೋಧಕ ಮಾತ್ರೆಯನ್ನು ತೆಗೆದುಕೊಳ್ಳಬೇಕು.
* ಆದರೆ ಇದನ್ನು ಪದೇ ಪದೇ ಬಳಸುವುದು ಒಳ್ಳೆಯದಲ್ಲ. ಒಂದು ಮಾತ್ರೆಯನ್ನು ಮಾತ್ರ ತೆಗೆದುಕೊಳ್ಳಬಹುದು ಅದಕ್ಕಿಂತ ಜಾಸ್ತಿ ತೆಗೆದುಕೊಂಡರೆ ಹಾರ್ಮೋನುಗಳಲ್ಲಿ ಏರುಪೇರಾಗಿ ಹೆಚ್ಚು ರಕ್ತಸ್ರಾವವಾಗುವ ಅಪಾಯವಿರುತ್ತದೆ ಎಂದು ಸಲಹೆ ನೀಡುತ್ತಾರೆ ವೈದ್ಯರು.ತುರ್ತು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡಾಗ ಕೆಲವರಲ್ಲಿ ವಾಂತಿ ಅಥವಾ, ವಾಕರಿಕೆಯ ಅನುಭವ ಕಾಡಬಹುದು.
* ಜೊತೆಗೆ ತಲೆನೋವು ಕೂಡ ಕಾಡುತ್ತದೆ. ಹೀಗಾಗಿ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
BIG BREAKING NEWS: ಮಾಜಿ ಶಾಸಕ ಎಸ್ ಕೆ ಬಸವರಾಜನ್, ಪತ್ನಿ ಸೌಭಾಗ್ಯಗೆ ಜಾಮೀನು
* ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡ ಬಳಿಕ 3 ರಿಂದ 4 ದಿನಗಳ ನಂತರ ಸಣ್ಣ ಪ್ರಮಾಣದಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳಬಹುದು. ಆದರೆ ಇದು ಮಾಸಿಕ ದಿನಗಳ ಸ್ರವಿಸುವಿಕೆ ಆಗಿರುವುದಿಲ್ಲ.
* ಮಾತ್ರೆಯ ಅಡ್ಡ ಪರಿಣಾಮದಿಂದ ಈ ರೀತಿ ಆಗಿರುತ್ತದೆ. ಇದನ್ನು ವಿಥ್ ಡ್ರಾವಲ್ ಬ್ಲೀಡಿಂಗ್ ಎನ್ನುತ್ತಾರೆ. ಹೀಗಾಗಿ ಇದು ಮುಟ್ಟಿನ ದಿನಗಳ ಮೇಲೂ ಪರಿಣಾಮ ಬೀರುತ್ತದೆ.
* ಗರ್ಭನಿರೊಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಮುಟ್ಟಿನ ದಿನಗಳಲ್ಲಿ ಬದಲಾವಣೆಯಾಗುತ್ತದೆ. ಮುಟ್ಟಿನ ದಿನ ತಡವಾಗಬಹುದು.
* ಅದೇ ರೀತಿ ಮುಂದಿನ ಕೆಲವು ತಿಂಗಳ ಮಾಸಿಕ ದಿನಗಳು ಕೂಡ ಸರಿಯಾಗಿ ಆಗದೇ ಇರಬಹುದು
* ಕೆಲವೊಮ್ಮೆ ಎಷ್ಟೇ ಗರ್ಭ ನಿರೋಧಕ ತೆಗೆದುಕೊಂಡರೂ ಗರ್ಭ ಧರಿಸುವ ಸಾಧ್ಯತೆ ಇರುತ್ತದೆ. ತುರ್ತು ಗರ್ಭನಿರೋಧಕ ಮಾತ್ರೆ ತೆಗೆದುಕೊಂಡರೂ ಶೇ. 10 ರಿಂದ 15 ಪ್ರತಿಶತದಷ್ಟು ಗರ್ಭಧಾರಣೆಯಾಗುತ್ತದೆ.
* ಹೀಗಾಗಿ ಲೈಂಗಿಕತೆಯ ನಂತರದ ದಿನಗಳಲ್ಲಿ ಋತುಚಕ್ರವಾಗಿಲ್ಲವೆಂದರೆ ಗರ್ಭಧಾರಣೆಯನ್ನು ತಪಾಸಣೆ ಮಾಡಿಸುವುದು ಒಳ್ಳೆಯದು.
BIG BREAKING NEWS: ಮಾಜಿ ಶಾಸಕ ಎಸ್ ಕೆ ಬಸವರಾಜನ್, ಪತ್ನಿ ಸೌಭಾಗ್ಯಗೆ ಜಾಮೀನು