ಮಧ್ಯಪ್ರದೇಶ: ದಂಪತಿಯ ನಡುವಿನ ಜಗಳ ಬಗೆಹರಿಸಲು ಬಂದ ಪತಿಯ ಸ್ನೇಹಿತನೊಬ್ಬ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವಿಷಯವನ್ನು ಪತಿಗೆ ತಿಳಿಸಿದರೆ, ಆತ ಮಹಿಳೆಗೆ ತಲಾಖ್ ನೀಡಿ ಮನೆಯಿಂದ ಹೊರಹಾಕಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಈ ಬಗ್ಗೆ ಮಹಿಳೆ ತನ್ನ ಪತಿ ಮತ್ತು ಆತನ ಸ್ನೇಹಿತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ತನ್ನ ಗಂಡನ ಸ್ನೇಹಿತನ ವಿರುದ್ಧ ಅತ್ಯಾಚಾರ ಮತ್ತು ಪತಿಗೆ ತ್ರಿವಳಿ ತಲಾಖ್ ನೀಡಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾಳೆ. ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಂತ್ರಸ್ತೆ ಮದುವೆ ಬಳಿಕ ಧರ್ಮ ಬದಲಿಸಿಕೊಂಡು ಮುಸ್ಲಿಂ ಆಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಈ ದಂಪತಿಗಳ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು.
ಈ ವಿಚಾರ ಪತಿಯ ಸ್ನೇಹಿತ ಹಸೀಬ್ ಸಿದ್ದಿಕಿ ಅವರಿಗೆ ತಿಳಿದು ರಾಜಿ ಮಾಡುವ ನೆಪದಲ್ಲಿ ದಂಪತಿಯ ಮನೆಗೆ ಬಂದಿದ್ದಾನೆ. ಇದಾದ ಬಳಿಕ ಮನೆಯಲ್ಲಿ ಒಬ್ಬಳೇ ಮಹಿಳೆಯನ್ನು ಕಂಡು ಅತ್ಯಾಚಾರ ಎಸಗಿದ್ದಾನೆ. ಮಹಿಳೆ ತನ್ನ ಈ ಕೃತ್ಯದ ಬಗ್ಗೆ ಪತಿಗೆ ತಿಳಿಸಿದಾಗ, ಪತಿ ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ. ಇದೀಗ ಇಬ್ಬರ ಮೇಲೂ ದೂರು ದಾಖಲಿಸಿದ್ದಾರೆ.
BIGG NEWS : ರಾಜಕೀಯದಲ್ಲಿ ಒಕ್ಕಲಿಗ ಸಮುದಾಯದ ದುರ್ಬಳಕೆ ಆಗುತ್ತಿದೆ : ಸಚಿವ ಆರ್. ಅಶೋಕ್ ಕಿಡಿ
ಇಂಡಿಗೋ ಏರ್ಲೈನ್ಸ್ ವಿಮಾನದ ಗಗನಸಖಿಯೊಂದಿಗೆ ಅನುಚಿತ ವರ್ತನೆ, ಪ್ರಯಾಣಿಕನ ಬಂಧನ
BIGG NEWS : ದಕ್ಷಿಣ ಕರ್ನಾಟಕದ 14 ಜಿಲ್ಲೆಗಳ ಯುವ ಜನರಿಗೆ `ಅಗ್ನಿವೀರ್ ನೇಮಕಾತಿ’ಗೆ ಅರ್ಜಿ ಆಹ್ವಾನ