ಉತ್ತರ ಕನ್ನಡ: ಜಿಲ್ಲೆಯ ಭಟ್ಕಳದಲ್ಲಿ ಐಸಿಸ್ ಉಗ್ರನ ಜೊತೆಗೆ ನಂಟು ಹೊಂದಿದ್ದಂತ ಆರೋಪದ ಮೇರೆಗೆ ಮಹಿಳೆಯೊಬ್ಬರನ್ನು ಮುಂಬೈನ ಎಟಿಎಸ್ ಅಧಿಕಾರಿಗಳು ತೀವ್ರವಾಗಿ ವಿಚಾರಣೆ ನಡೆಸಿರೋದಾಗಿ ತಿಳಿದು ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ನಿನ್ನೆ ಆಗಮಿಸಿರೋ ಮುಂಬೈನ ಎಟಿಎಸ್ ಅಧಿಕಾರಿಗಳು, ಭಟ್ಕಳ ಪೊಲೀಸರ ಸಹಾಯದೊಂದಿಗೆ ಐಸಿಸ್ ಉಗ್ರನ ಜೊತೆಗೆ ನಂಟು ಹೊಂದಿದ್ದಂತ ಮಹಿಳೆಯೊಬ್ಬರನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರದ ನಾಸಿಕ್ ಟಿಡ್ಕೆ ಕಾಲೋನಿಯಲ್ಲಿ ಐಸಿಸ್ ಜೊತೆಗೆ ನಂಟು ಹೊಂದಿದ್ದಂತ ಆರೋಪದಲ್ಲಿ ಹುಸೇನ್ ಅಬ್ದುಲ್ ಅಜೀಜ್ ಶೇಕ್(32) ಎಂಬಾತನನ್ನು ಬಂಧಿಸಲಾಗಿತ್ತು. ಬಂಧಿತ ಆರೋಪಿಯಿಂದ ಸಿಮ್ ಕಾರ್ಡ್, ಮೊಬೈಲ್ ಪೋನ್, ಪೆನ್ ಡ್ರೈವ್, ಲ್ಯಾಪ್ ಟಾಪ್ ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಿದ್ದರು.
ಇಂತಹ ಬಂಧಿತ ಐಸಿಸ್ ಜೊತೆಗೆ ಸಂಪರ್ಕ ಹೊಂದಿದ್ದಂತ ಶಂಕಿತ ಆರೋಪಿ ಹುಸೇನ್ ಜೊತೆಗೆ ಸಂಪರ್ಕವನ್ನು ಭಟ್ಕಳದ ಮಹಿಳೆಯೊಬ್ಬರು ಹೊಂದಿದ್ದರು. ಅಲ್ಲದೇ ಆತನನ್ನು ಭಟ್ಕಳಕ್ಕೆ ಕರೆಸಿಕೊಂಡಿದ್ದಂತ ಮಹಿಳೆ, ಲಾಡ್ಜ್ ಒಂದರಲ್ಲಿ ಖಾಸಗಿಯಾಗಿಯೂ ಕೆಲ ಕಾಲ ಭೇಟಿಯಾಗಿದ್ದರು ಎಂಬುದಾಗಿ ತನಿಖೆಯಿಂದ ತಿಳಿದು ಬಂದಿತ್ತು.
ಇದಷ್ಟೇ ಅಲ್ಲದೇ ಶಂಕಿತ ಉಗ್ರ ಹುಸೇನ್ ಜೊತೆಗೆ ಸಂಪರ್ಕ ಹೊಂದಿದ್ದಂತ ಮಹಿಳೆಯು, ವಿವಿಧ ಹಂತದಲ್ಲಿ 4 ರಿಂದ 5 ಲಕ್ಷ ಹಣವನ್ನು ವರ್ಗಾವಣೆ ಮಾಡಿರೋದಾಗಿ ತನಿಖೆಯಲ್ಲಿ ಮಹತ್ವದ ಮಾಹಿತಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ನಿನ್ನೆ ಎಟಿಎಸ್ ಅಧಿಕಾರಿಗಳು ಭಟ್ಕಳದ ಮಹಿಳೆಯನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
‘ಮ್ಯಾಚ್ ಫಿಕ್ಸಿಂಗ್’ ಆರೋಪದ ಮೇಲೆ ‘ಶೋಯೆಬ್ ಮಲಿಕ್’ ‘ಬಿಪಿಎಲ್’ ಗುತ್ತಿಗೆ ರದ್ದು -ವರದಿ
BIG NEWS : ಬಿಜೆಪಿ ಜೆಡಿಎಸ್ ನಿಂದ 30 ಜನ ಬರ್ತಾರೆ : ಸ್ಪೋಟಕ ಹೇಳಿಕೆ ನೀಡಿದ ಸಚಿವ ಚೆಲುವರಾಯಸ್ವಾಮಿ