ಬೆಂಗಳೂರು: ನಗರದ ಬೇಗೂರಿನ ನ್ಯೂ ಮೈಕೋ ಲೇಔಟ್ನಲ್ಲಿ ಅಶ್ಲೀಲ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಎಂದು ಹೇಳಿ ಪ್ರಿಯತಮೆ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಪ್ರಿಯಕರನ ಕೊಲೆಗೈದಿರುವ ಘಟನೆ ನಡೆದಿದೆ.
ನಗರದ ನಿವಾಸಿ ಡಾ.ವಿಕಾಸ್ ಕೊಲೆಯಾಗಿರುವ ವ್ಯಕ್ತಿ. ಪ್ರತಿಭಾ, ಸುಶೀಲ್, ಗೌತಮ್ ಮತ್ತು ಸೂರ್ಯ ಎಂಬಾತವರು ವಿಕಾಸ್ ನನ್ನು ಕೊಲೆ ಮಾಡಿದ್ದಾರೆ.
ಉಕ್ರೇನ್ನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದ್ದ ವಿಕಾಸ್ ಚನ್ನೈನಲ್ಲಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ. ಪ್ರತಿಭಾ ಹಾಗೂ ವಿಕಾಸ್ ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಎರಡೂ ಕುಟುಂಬದಿಂದಲೂ ನವೆಂಬರ್ನಲ್ಲಿ ಮದುವೆ ಮಾಡುವ ಬಗ್ಗೆ ಸಮ್ಮತಿ ಸಿಕ್ಕಿತ್ತು. ಈ ನಡುವೆ ಪ್ರತಿಭಾ ಹಾಗೂ ಆಕೆಯ ತಾಯಿಯ ಅಶ್ಲೀಲ ಫೋಟೋಗಳನ್ನ ಸೆರೆಹಿಡಿದಿದ್ದ ವಿಕಾಸ್ ಅವುಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ.