ಬೆಂಗಳೂರು: ನಗರದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಂತ ಸವಾರನೊಬ್ಬನಿಗೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೇ ಸಿಟ್ಟಾದಂತ ಬೈಕ್ ಸವಾರ ಮಹಿಳಾ ಐಪಿಎಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾನೆ. ಈ ಹಿನ್ನಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಂಧಿಸಿ ಜೈಲಿಗಟ್ಟಿದ್ದಾರೆ.
ಬೆಂಗಳೂರಿನ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಎಂಟಿಎಫ್ ಎಸ್.ಪಿಯಾಗಿರುವಂತ ಮಹಿಳಾ ಐಪಿಎಸ್ ಅಧಿಕಾರಿ ಶೋಭಾರಾಣಿಯವರು, ಬೈಕ್ ಸವಾರನೊಬ್ಬನಿಗೆ ಬುದ್ಧಿವಾದ ಹೇಳಿದ್ದರು. ಆ ವೇಳೆಯಲ್ಲಿ ಅವರಿಗೆ ಅವಾಜ್ ಹಾಕಿದ್ದಂತ ಆತ, ಬೆದರಿಕೆಯನ್ನು ಹಾಕಿದ್ದ ಎಂಬುದಾಗಿ ಆತನ ವಿರುದ್ಧ ದೂರು ದಾಖಲಾಗಿತ್ತು.
ಬೆಂಗಳೂರಿನ ಆರ್ ಎಂ ಸಿ ಯಾರ್ಡ್ ಠಾಣೆಯ ಪೊಲೀಸರು ಬೈಕ್ ಸವಾರನ ವಿರುದ್ಧ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಈ ಮೂಲಕ ಸರಿಯಾದ ದಾರಿಯಲ್ಲಿ ನಡೆಯಪ್ಪ, ಸರಿಯಾಗಿ ಬೈಕ್ ಓಡಿಸಪ್ಪ ಅಂತ ಹೇಳಿದ್ದಕ್ಕೆ ಬೆದರಿಕೆ ಹಾಕಿದಂತ ಬೈಕ್ ಸವಾರ ಈಗ ಬಂಧನಕ್ಕೆ ಒಳಗಾಗಿ ಜೈಲುಪಾಲಾಗಿದ್ದಾನೆ.
BREAKING: ‘ಸಿಎಂ ಸಿದ್ಧರಾಮಯ್ಯ’ ಜೊತೆಗಿನ ಮಾತುಕತೆ ಸಕ್ಸಸ್: ‘ಅತಿಥಿ ಉಪನ್ಯಾಸಕ’ರಿಂದ ಮುಷ್ಕರ ವಾಪಾಸ್
BIG NEWS: ‘ರಾಜ್ಯ ಸರ್ಕಾರಿ ನೌಕರ’ರಿಗೆ ಶುಭಸುದ್ದಿ: ‘NPS ರದ್ದತಿ’ ಬಗ್ಗೆ ‘ಸಿಎಂ ಸಿದ್ಧರಾಮಯ್ಯ’ ಮಹತ್ವದ ಘೋಷಣೆ