ಬೆಂಗಳೂರು: ಮಳೆಯ ಅವಾಂತರದಿಂದ ನಗರದಲ್ಲಿ ರಸ್ತೆ ಗುಂಡಿಗಳಾಗಿ ಹಾಳಾಗಿ ಹೋಗಿದೆ. ಈ ಸಂಬಂಧ ಗುಂಡಿಗೆ ತಪ್ಪಿಸಲು ಹೋಗಿ ಅದೆಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದರೆ,ಇನ್ನು ಕೆಲವರು ಕೈ ಕಾಲಿಗೆ ಪೆಟ್ಟಾಗಿ ನೋವು ಅನುಭವಿಸುತ್ತಿದ್ದಾರೆ.
BIGG NEWS: ವಿವಾದಕ್ಕೆ ಗುರಿಯಾದ ಹೆಡ್ ಬುಷ್ ಚಿತ್ರ: ಡಾಲಿ ಕಟೌಟ್ಗೆ ಚಪ್ಪಲಿ ಹಾರ ಹಾಕಿ ಬಜರಂಗದಳ ಆಕ್ರೋಶ
ಇತ್ತೀಚೆಗೆ ರಾಜಾಜಿನಗರ ಸುಜಾತ ಟಾಕೀಸ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೀಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗೆ ನೋಟಿಸ್ ಜಾರಿಯಾಗಿದೆ.
BIGG NEWS: ವಿವಾದಕ್ಕೆ ಗುರಿಯಾದ ಹೆಡ್ ಬುಷ್ ಚಿತ್ರ: ಡಾಲಿ ಕಟೌಟ್ಗೆ ಚಪ್ಪಲಿ ಹಾರ ಹಾಕಿ ಬಜರಂಗದಳ ಆಕ್ರೋಶ
ಮಲ್ಲೇಶ್ವರಂ ಟ್ರಾಫಿಕ್ ಪೊಲೀಸರು ಈ ನೋಟಿಸ್ ನೀಡಿದ್ದಾರೆ.ಕಳೆದ 10 ದಿನಗಳ ಹಿಂದೆ ಸುಜಾತ ಟಾಕೀಸ್ ಬಳಿ ಗುಂಡಿ ತಪ್ಪಿಸಲು ಹೋಗಿ ಬಸ್ ಹರಿದು ಮಹಿಳೆ ಸಾವನ್ನಪ್ಪಿದ್ದರು. ಮಹಿಳೆ ಸಾವನ್ನಪ್ಪಿದ್ದ ಬಳಿಕ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಕೆಎಸ್ ಆರ್ ಟಿಸಿ ಬಸ್ ಚಾಲಕನ ಮೇಲೂ ಕೇಸ್ ಹಾಕಿದ್ದರು.
‘AICC’ ಅಧ್ಯಕ್ಷರಾಗುತ್ತಿದ್ದಂತೆ ಎಲ್ಲರ ಹುಬ್ಬೇರುವಂತೆ ಮಹತ್ವದ ನಿರ್ಧಾರ ಕೈಗೊಂಡ ಖರ್ಗೆ |Mallikarjuna Kharge
ಈಗ ಬಿಬಿಎಂಪಿಗೆ ನೋಟಿಸ್ ನೀಡಿ ರಸ್ತೆ ಡಾಂಬರೀಕರಣ ಟೆಂಡರ್ ಯಾರಿಗೆ ನೀಡಿದ್ರಿ..?, ರಸ್ತೆ ಡಾಂಬರೀಕರಣ ನಿರ್ವಹಣೆ ಹೊಣೆ ಹೊತ್ತಿದ್ದ ಎಂಜಿನಿಯರ್ ಯಾರು?, ಅಪಘಾತ ಆದ ಜಾಗದಲ್ಲಿ ಯಾವಾಗ ಡಾಂಬರೀಕರಣ ಆಗಿದ್ದು? ಇದೆಲ್ಲದರ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿ ಯೋಜನಾ ವಿಭಾಗದ ಎಂಜಿನಿಯರ್ ಗೆ ನೋಟಿಸ್ ನೀಡಲಾಗಿದೆ.