ಕೌಶಂಬಿ (ಉತ್ತರ ಪ್ರದೇಶ): ಕೌಶಂಬಿ ಜಿಲ್ಲೆಯ ಚಾರ್ವಾ ಪ್ರದೇಶದಲ್ಲಿ ಸೋಮವಾರ ಇಬ್ಬರು ದುಷ್ಕರ್ಮಿಗಳು ಹಿರಿಯ ಬ್ಯಾಂಕ್ ಮ್ಯಾನೇಜರ್ ಮೇಲೆ ಆ್ಯಸಿಡ್ ದಾಳಿ ಮಾಡಿದ್ದು, ತೀವ್ರ ಸುಟ್ಟಗಾಯಗಳಿಂದ ಆಸ್ಪತ್ರೆಗ ದಾಖಲಾಗಿರುವ ಘಟನೆ ನಡೆದಿದೆ.
ಸಂತ್ರಸ್ತೆಯನ್ನು ಪ್ರಯಾಗರಾಜ್ ನಿವಾಸಿ ದೀಕ್ಷಾ ಸೋಂಕರ್ (34) ಎಂದು ಗುರುತಿಸಲಾಗಿದೆ. ದೀಕ್ಷಾ ಕೌಶಂಬಿ ಜಿಲ್ಲೆಯ ಚೈಲ್ ತೆಹಸಿಲ್ನ ಸೈಯದ್ ಸರವಾ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಹಿರಿಯ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾತ್ರಿ 11.30ರ ಸುಮಾರಿಗೆ ಚಿಲ್ಲಾ ಶಹಬಾಜಿ ಗ್ರಾಮದ ಬಳಿ ಇಬ್ಬರು ಯುವಕರು ದೀಕ್ಷಾಳ ಸ್ಕೂಟರ್ ತಡೆದು ಆಕೆಯ ಮುಖಕ್ಕೆ ಆಸಿಡ್ ಎರಚಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಮರಾಜ್ ಮೀನಾ ತಿಳಿಸಿದ್ದಾರೆ.
ಪ್ರಥಮ ಚಿಕಿತ್ಸೆಯ ನಂತರ ಆಕೆಯನ್ನು ಪ್ರಯಾಗ್ರಾಜ್ನಲ್ಲಿರುವ ಎಸ್ಆರ್ಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದಾಗ ಅಲ್ಲಿದ್ದ ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ನು ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ಪ್ರಾರಂಭಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
BIGG NEWS : ವಸತಿ ರಹಿತರಿಗೆ ಗುಡ್ ನ್ಯೂಸ್ : ವಿವಿಧ ಯೋಜನೆಗಳಡಿ ಮನೆ ನಿರ್ಮಿಸಲು ಅರ್ಜಿ ಆಹ್ವಾನ