ತಮಿಳುನಾಡು : ಅಪರಿಚಿತ ವ್ಯಕ್ತಿಯೊಬ್ಬ ಹಗಲು ಹೊತ್ತಿನಲ್ಲಿ ಮಹಿಳಾ ವಕೀಲರೊಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ ನಡೆದಿದೆ.
BIGG NEWS : ಭಾರತ ವಿರುದ್ಧ ಪಾಕ್ ಹೊಸ ಸಂಚು ; ಪ್ರವಾಹ ನಡುವೆ ಅಸಹಾಯಕರಿಗೆ ‘ಭಯೋತ್ಪಾದನೆ ಟ್ರೈನಿಂಗ್’
ಸಂತ್ರಸ್ತೆಯನ್ನು ಜಮೀಲಾ ಬಾನು ಎಂದು ಗುರುತಿಸಲಾಗಿದ್ದು, ಇವರು ಕುಮಾರನ್ ಸಲೈನಲ್ಲಿರುವ ಮನಿಲಾ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದಾರೆ. ತನ್ನ ಸಂಶೋಧನೆಗಾಗಿ ಹಿಂದಿನ ಪ್ರಕರಣಗಳ ಬಗ್ಗೆ ಟಿಪ್ಪಣಿ ತೆಗೆದುಕೊಳ್ಳಲು ಅವರು ತಮ್ಮ ಮಗಳೊಂದಿಗೆ ವಕೀಲರ ಕಚೇರಿಗೆ ಭೇಟಿ ನೀಡಿದ್ದರು.
ಈ ವೇಳೆ ಕಚೇರಿಗೆ ಏಕಾಏಕಿ ನುಗ್ಗಿದ ವ್ಯಕ್ತಿಯೊಬ್ಬ ಜಮೀಲಾ ಬಾನು ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಆಕೆಯ ಮಗಳು ಅವಳನ್ನು ರಕ್ಷಿಸಲು ಪ್ರಯತ್ನಿಸಿದಾಗ ಾಕೆಯ ಮೇಲೂ ಹಲ್ಲೆಗೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ಜಮೀಲಾಳ ಚೀರಾಟ ಕೇಳಿ ಜನರು ಸಹಾಯಕ್ಕೆ ಬರುತ್ತಿದ್ದಂತೆಯೇ ದುಷ್ಕರ್ಮಿಯು ಆಯುಧ ಬಿಟ್ಟು ಪರಾರಿಯಾಗಿದ್ದಾನೆ.
ಜಮೀಲಾ ಅವರ ತಲೆ ಮತ್ತು ಕೈಗಳಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆಯಲ್ಲಿ ಭೂಕಂಪನ, ರಿಕ್ಟರ್ ಮಾಪಕದಲ್ಲಿ 4.4 ದಾಖಲು