ರಾಮನಗರ: ಜಿಲ್ಲೆಯ ಕೆಂಪೇಗೌಡ ಸರ್ಕಲ್ ನಲ್ಲಿರುವ ಅಮ್ಮನ ಮಡಿಲು ಎಂಬ ನಿರಾಶ್ರಿತರ ಮತ್ತು ವೃದ್ಧರ ಆಶ್ರಮದಲ್ಲಿ ಯುವತಿಗೆ ಕಿರುಕುಳ ನೀಡಲಾಗಿರುವ ಆರೋಪ ಕೇಳಿಬಂದಿದೆ.
BIGG NEWS: ದೀಪಾವಳಿ ಹಬ್ಬಕ್ಕೆ ಜನರ ಜೇಬಿಗೆ ಕತ್ತರಿ; ಹೂವು, ಹಣ್ಣು, ಪಟಾಕಿ ಬೆಲೆ ಗಗನಕ್ಕೇರಿಕೆ
ರಾಮನಗರದ ಕೆಂಪೇಗೌಡ ಸರ್ಕಲ್ ನಲ್ಲಿರುವ ಅಮ್ಮನ ಮಡಿಲು ಎಂಬ ನಿರಾಶ್ರಿತರ ಮತ್ತು ವೃದ್ಧರ ಆಶ್ರಮದಲ್ಲಿ ಯುವತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆಯಂತೆ. ಈ ಸಂಬಂಧ ಮೂವರ ವಿರುದ್ಧ ಕೇಸ್ ದಾಖಲಾಗಿದ್ದು ತನಿಖೆಗೆ ಆಗ್ರಹಿಸಲಾಗಿದೆ.ಆಶ್ರಯ ನೀಡುವುದಾಗಿ ಕರೆದೊಯ್ದು ಯುವತಿ ಮೇಲೆ ಅತ್ಯಾಚಾರವೆಸಗಿ, ಬಲವಂತದ ಮದುವೆ ಮಾಡಿ ಮೂರು ತಿಂಗಳಗಳ ಕಾಲ ಆಶ್ರಮದಲ್ಲಿ ಇಟ್ಟುಕೊಂಡು ಕಿರುಕುಳ ನೀಡಲಾಗಿದೆ ಎಂದು ನೊಂದ ಯುವತಿ ಆರೋಪಿಸಿದ್ದಾರೆ.
BIGG NEWS: ದೀಪಾವಳಿ ಹಬ್ಬಕ್ಕೆ ಜನರ ಜೇಬಿಗೆ ಕತ್ತರಿ; ಹೂವು, ಹಣ್ಣು, ಪಟಾಕಿ ಬೆಲೆ ಗಗನಕ್ಕೇರಿಕೆ
ಯುವತಿಗೆ ಆಶ್ರಮದ ಮಾಲಕೀ ಪ್ರೀತಿ ಹಾಗೂ ಆಕೆಯ ಸ್ನೇಹಿತರಾದ ಸೌಮ್ಯ, ಯೋಗೇಶ್ ಕಿರುಕುಳ ನೀಡಿ ಚಿತ್ರಹಿಂಸೆ ಮಾಡಿದ್ದಾರಂತೆ. ಈ ಬಗ್ಗೆ ನೊಂದ ಯುವತಿ ರಾಮನಗರದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.