ಬೆಂಗಳೂರು : ಮಹಿಳೆ ಅಪಹರಣ ಪ್ರಕರಣದಲ್ಲಿ ಶಾಸಕ ಎಚ್ ಡಿ ರೇವಣ್ಣ ಬಂಧನ ವಾಗಿದ್ದು ಇದೀಗ ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ನಿವಾಸದಲ್ಲಿ ಎಸ್ಐಟಿಯಿಂದ ಮಹಜರು ನಡೆಯುತ್ತಿದೆ. ಆದರೆ ಈ ಬೆಳೆ ರೇವಣ್ಣ ಪರ ವಕೀಲರಿಗೆ ನಿವಾಸದ ಒಳಗೆ ಬಿಟ್ಟಿಲ್ಲ ಎನ್ನುವ ಕಾರಣಕ್ಕೆ ಇದೀಗ ಅವರು ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನ ಕಕ್ಷಿದಾರನ ಮನೆಯಲ್ಲಿ ಮಹಜರು ನಡೆಯುತ್ತಿದೆ ಆದರೆ ವಕೀಲರಾದ ನನ್ನನ್ನೇ ನಿವಾಸದ ಒಳಗೆ ಬಿಡುತ್ತಿಲ್ಲ ಎಂದು ರೇವಣ್ಣ ಪರ ವಕೀಲರಾದ ಗೋಪಾಲ್ ಅವರು ಅಸಮಾಧಾನ ಹೊರಹಾಕಿದ್ದಾರೆ.
ಮಹಜರು ಪ್ರಕ್ರಿಯೆ ನೋಟಿಸ್ ನನಗೆ ಕೊಟ್ಟಿದ್ದಾರೆ. ಭವಾನಿ ಅವರಿಗೆ ಮಂಡಿ ಆಪರೇಷನ್ ಆಗಿರುವ ಹಿನ್ನೆಲೆಯಲ್ಲಿ ಮಹಜರು ಪ್ರಕ್ರಿಯೆ ನೋಡಿಕೊಳ್ಳಲು ನನಗೆ ತಿಳಿಸಿದ್ದರು.ಆದರೆ ನನ್ನ ಕಕ್ಷಿದಾರ ಮನೆಯಲ್ಲಿ ನನಗೆ ಮಹಜರು ನಡೆಯುವ ವೇಳೆ ನಿವಾಸದ ಒಳಗೆ ಬಿಡುತ್ತಿಲ್ಲ ಎಂದು ವಕೀಲರಾದ ಗೋಪಾಲ್ ಅಸಮಾಧಾನ ಹೊರಹಾಕಿದ್ದಾರೆ.