ಬೆಂಗಳೂರು : ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ಎಚ್ ಡಿ ರೇವಣ್ಣ ಅವರನ್ನು ಬಂಧಿಸಲಾಗಿದ್ದು ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿಯಾಗಿರುವ ಭವಾನಿ ರೇವಣ್ಣ ಸಂಬಂಧಿಯಾಗಿರುವ ಸತೀಶ್ ಭಾವವನ್ನು ಇದೀಗ ಎಂಟು ದಿನಗಳ ಕಾಲ ಎಸ್ ಐ ಟಿ ಕಸ್ಟಡಿಗೆ ನೀಡಿ ಬೆಂಗಳೂರಿನ 17ನೇ ಎಸಿ ಎಂ ಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಹೌದು ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಎಸ್ಐಟಿ ಸತೀಶ್ ಬಾಬು ಕಸ್ಟಡಿಗೆ ನೀಡಿ ಎಂದು ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮೇ 13 ರವರೆಗೆ ಆರೋಪಿ ಸತೀಶ್ ಬಾಬು ಎಸ್ ಐ ಟಿ ಕಸ್ಟಡಿಗೆ ನೀಡಿ ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯ ಈ ಕುರಿತು ಆದೇಶ ಹೊರಡಿಸಿದೆ.
ಆರೋಪಿ ಸತೀಶ್ ಬಾಬುಗೆ ಎಂಟು ದಿನ ಎಸ್ಐಟಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಮಹಿಳೆ ಅಪಹರಣ ಪ್ರಕರಣದಲ್ಲಿ ಸತೀಶ್ ಬಾಬುನನ್ನು ಬಂಧಿಸಲಾಗಿತ್ತು. ಈ ಕುರಿತಂತೆ ಎಸ್ಐಟಿ ಕೋರ್ಟ್ ಗೆ ಹಾಜರುಪಡಿಸಿ ಕಸ್ಟಡಿಗೆ ನೀಡಿ ಎಂದು ಮನವಿ ಮಾಡಿತ್ತು ಎನ್ನಲಾಗಿದೆ. ಹಾಗಾಗಿ ಸತೀಶ್ ಬಾಬು ಅನ್ನು ಮೇ 13ರ ವರೆಗೆ ಅಂದರೆ ಎಂಟು ದಿನಗಳ ಕಾಲ ಎಸ್ ಐ ಟಿ ಕಸ್ಟಡಿಗೆ ನೀಡಿದೆ.