ಕಲಬುರಗಿ: ಜಿಲ್ಲೆಯಲ್ಲಿ ಜನರ ಮೇಲೆ ತೋಳವೊಂದು ಅಟ್ಟಹಾಸ ಮೆರೆದಿದೆ. ದಾಳಿಯ ಪರಿಣಾಮ 8 ಜನರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಇವರಲ್ಲಿ ಓರ್ವನ ಸ್ಥಿತಿ ಗಂಭೀರಗೊಂಡಿರೋದಾಗಿ ಹೇಳಲಾಗುತ್ತಿದೆ.
ಕಲಬುರ್ಗಿ ಜಿಲ್ಲೆಯ ಅಳಂದ ತಾಲೂಕಿನ ಚಲಗೇರಿ ಗ್ರಾಮದಲ್ಲಿ 8 ಜನರ ಮೇಲೆ ತೋಳವೊಂದು ದಾಳಿಯನ್ನು ಮಾಡಿದೆ. ಈ ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ.
ತೋಳದ ದಾಳಿಯಲ್ಲಿ ಶರಣಪ್ಪ ಶಿವ ಗುಂಡ ಜಮಾದಾರ, ಶರಣಪ್ಪ ಜಟ್ಟೆಪ್ಪ ಜಮಾದಾರ ಹಾಗೂ ಅನಸುಬಾಯಿ ಮಾರುತಿ ಮುಗಳಿ, ನೀಲಪ್ಪ ಹಾಲೋಳ್ಳಿ, ಮಲ್ಲಪ್ಪ ದತ್ತಣ್ಣ ಜಮಾದಾರ ಮತ್ತು ಸುನೀಲ್ ಮುಲಗೆ, ಶರಣಪ್ಪ ಹಣಮಂತರಾವ ದಿಂಡುರೆ ಎಂಬುವರು ಗಾಯಗೊಂಡಿದ್ದಾರೆ. ಇವರಲ್ಲಿ ಶರಣಪ್ಪ ಗುರಣ್ಣ ಧಲ್ಲು ಎಂಬುವರ ಸ್ಥಿತಿ ಗಂಭೀರವಾಗಿರೋದಾಗಿ ಹೇಳಲಾಗುತ್ತಿದೆ.
ತೋಳದ ದಾಳಿಗೆ ಒಳಗಾಗಿರುವಂತ ನಾಲ್ವರಿಗೆ ಅಳಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೇ, ತೀವ್ರವಾಗಿ ಗಾಯಗೊಂಡಿರುವಂತ ಶರಣಪ್ಪ ಅವರನ್ನು ಸೊಲ್ಲಾಪುರದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ವಿಷಯ ತಿಳಿದು ಚಲಗೇರಿ ಗ್ರಾಮಕ್ಕೆ ಪಶು ವೈದ್ಯರು, ಅಧಿಕಾರಿಳು, ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
BIG Alert: ಪೋಷಕರೇ..! ನೀವು ಮಕ್ಕಳಿಗೆ ‘ಬಾಂಬೆ ಮಿಠಾಯಿ’ ಕೊಡಿಸ್ತಾ ಇದ್ದೀರಾ.? ಇಲ್ಲಿದೆ ‘ಶಾಕಿಂಗ್ ನ್ಯೂಸ್’
BREAKING : ಲೈಂಗಿಕ ದೌರ್ಜನ್ಯ ಪ್ರಕರಣ : ಮಾಜಿ ಫುಟ್ಬಾಲ್ ಆಟಗಾರ ‘ಡ್ಯಾನಿ ಅಲ್ವೆಸ್’ಗೆ 4.5 ವರ್ಷ ಜೈಲು