ಬೆಂಗಳೂರು : ರಾಜ್ಯದಲ್ಲಿ ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿಷೇಧದ ಬೆನ್ನಲ್ಲೆ, ಚಿತ್ತಾಪುರದಲ್ಲಿ ನಾಳೆ ಆರ್ ಎಸ್ ಎಸ್ ಪಥಸಂಚಲನ ಹಮ್ಮಿಕೊಂಡಿದೆ. ಆದರೆ ಈ ಒಂದು ಪಥ ಸಂಚಲನಕ್ಕೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಬ್ಯಾನರ್ ಹಾಗೂ ಭಗವಾಧ್ವಜಗಳನ್ನು ತೆರವುಗೊಳಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಬ್ಯಾನರ್, ಧ್ವಜ, ಪಥಸಂಚಲನ ಯಾವುದೇ ಇರಬಹುದು ಆಯೋಜಕರು ಅನುಮತಿ ತೆಗೆದುಕೊಂಡಿದ್ದಾರ? ಅಂತ ಪ್ರಶ್ನಿಸಿದರು. ಅನಧಿಕೃತವಾಗಿ ನಮ್ಮ ಪಕ್ಷದ ಬ್ಯಾನರ್ ಹಾಕಿದಾಗಲೇ ನನಗೆ ಕಮಿಷನರ್ ಫೈನ್ ಹಾಕಿದ್ದರು. ಎಲ್ಲದಕ್ಕೂ ನಿಯಮ ಅಂತ ಇರುತ್ತದೆ. ಅನುಮತಿ ಪಡೆದು ಶುಲ್ಕ ಪಾವತಿಸಲಿ. ಇನ್ನು RSS ಪಥ ಸಂಚಲನಕ್ಕೆ ಅನುಮತಿ ತೆಗೆದುಕೊಂಡಿಲ್ಲ ಕೇವಲ ಮಾಹಿತಿ ಕೊಡುವುದಲ್ಲ ಪಥ ಸಂಚಲನಕ್ಕೆ ಅನುಮತಿ ಕೇಳಬೇಕು. ನೋಂದಣಿ ಸಂಖ್ಯೆ ಎಷ್ಟು ಜನರು ಸೇರುತ್ತಾರೆ ಏನಾದರೂ ಆದರೆ ನಾವು 10 ಜನರಿದ್ದೇವೆ ಅಂತ ಅನುಮತಿ ಪಡೆಯಲಿ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.
ಆರ್ ಎಸ್ ಎಸ್ ಧ್ವಜ ಅಂದರೆ ಅದೇನು ರಾಷ್ಟ್ರ ಧ್ವಜನಾ? ಆರ್ ಎಸ್ ಎಸ್ ನವರು ಕಟ್ಟರ್ ಪಂಥಿಗಳು ಹಾಗೂ ದೇಶಭಕ್ತರು. ಮನೆಗೆ ನುಗ್ಗಿ ಹೊಡೆಯುತ್ತೇವೆ ಅಂತ ಬಿಜೆಪಿ ಮುಖಂಡನೊಬ್ಬ ಹೇಳುತ್ತಾನೆ. ಇವರನ್ನು ನಾವು ಬಿಡಬೇಕ? ಈ ಬಗ್ಗೆ ಡಿಜಿಪಿಗೆ ದೂರು ನೀಡುತ್ತೇನೆ. ಕಾನೂನು ಪಾಲನೆ ಮಾಡಿ ಅಂದರೆ ತಪ್ಪ? ಅವರು ನನ್ನ ಚಾಲೆಂಜ್ ಮಾಡುತ್ತಿಲ್ಲ. ಕಾನೂನನ್ನು ಚಾಲೆಂಜ್ ಮಾಡುತ್ತಿದ್ದಾರೆ ನಾಳೆ ಕಾನೂನು ಪಾಲನೆ ಮಾಡಲ್ಲ ಅಂತಾರೆ ಆಗ ಏನಾಗುತ್ತದೆ? ಆರ್ ಎಸ್ ಎಸ್ ನವರು ಸಂಸ್ಕೃತರು ಅಂತ ಅಂದುಕೊಂಡಿದ್ದೆವು. ಮೊನ್ನೆ ನಿಮ್ಮ ಭಾಷೆ ಎಲ್ಲ ಗೊತ್ತಾಗಿದೆ ಅನುಮತಿ ಪಡೆದಿಲ್ಲ, ಅದಕ್ಕೆ ಎಲ್ಲವನ್ನು ತೆರವು ಮಾಡಿದ್ದೇವೆ ಎಂದು ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದರು.