ಬೆಂಗಳೂರು: ಬೆಂಗಳೂರು ಮೂಲದ ಪ್ರಮುಖ ಐಟಿ ಕಂಪನಿ ವಿಪ್ರೋ ತನ್ನ ಉದ್ಯೋಗಿಗಳಿಗೆ ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ಹೌದು, 2022ನೇ ಹಣಕಾಸು ವರ್ಷದ ವಾರ್ಷಿಕ ಇನ್ಕ್ರಿಮೆಂಟ್ಗಳನ್ನು ಘೋಷಿಸಿದೆ. ಇದರ ಅನ್ವಯ ಸೆಪ್ಟೆಂಬರ್ ತಿಂಗಳಿನಿಂದ ಕಂಪನಿಯ ಶೇಕಡಾ 96 ರಷ್ಟು ಉದ್ಯೋಗಿಗಳ ವಾರ್ಷಿಕ ವೇತನ ಹೆಚ್ಚಳವಾಗಲಿದೆ. ವರದಿಯ ಪ್ರಕಾರ, ಮುಂದಿನ ದಿನಗಳಲ್ಲಿ ಉದ್ಯೋಗಿಗಳು ತಮ್ಮ ಮ್ಯಾನೇಜರ್ಗಳಿಂದ ಇನ್ಕ್ರಿಮೆಂಟ್ ಪತ್ರಗಳನ್ನು ಸ್ವೀಕರಿಸುತ್ತಾರೆ.
ಕಳೆದ ವರ್ಷದ ತ್ರೈಮಾಸಿಕದಲ್ಲಿ ಹಣಕಾಸಿನ ಒತ್ತಡಗಳ ಹೊರತಾಗಿಯೂ, ನಾವು ಗಣನೀಯವಾಗಿ ವೇತನ ಹೆಚ್ಚಿಸಿದ್ದೇವೆ ಎಂದು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೌರಭ್ ಗೋವಿಲ್ ಅವರು ಉದ್ಯೋಗಿಗಳಿಗೆ ಮೇಲ್ ಮಾಡಿದ್ದಾರೆ. ʻಮುಂದಿನ ಕೆಲವು ದಿನಗಳಲ್ಲಿ ನಿಮ್ಮ ಮ್ಯಾನೇಜರ್ನಿಂದ ನಿಮ್ಮ MSI ಪತ್ರವನ್ನು ನೀವು ಸ್ವೀಕರಿಸುತ್ತೀರಿ. ಉದ್ಯೋಗಿಗಳ ಕಾರ್ಯಕ್ಷಮತೆ ಮತ್ತು ಅರ್ಹತಾ ಮಾನದಂಡಗಳ ಆಧಾರದ ಮೇಲೆ ಸಂಬಳ ಹೆಚ್ಚಳ ಮಾಡಲಾಗಿದೆ. ಅದರ ಪ್ರಕಾರ, ಈ ಬಾರಿ 96% ಉದ್ಯೋಗಿಗಳ ಸಂಬಳ ಹೆಚ್ಚಲಿದೆʼ ಎಂದು ತಿಳಿಸಿಲಾಗಿದೆ.
C1 ಬ್ಯಾಂಡ್ ಉದ್ಯೋಗಿಗಳಿಗೆ (ಮ್ಯಾನೇಜರ್ಗಳು ಮತ್ತು ಮೇಲಿನವರು) ಕಳೆದ ವರ್ಷ ಜೂನ್ನಿಂದಲೇ ವೇತನ ಹೆಚ್ಚಳವಾಗಿತ್ತು. ಆದ್ರೆ, ಈ ವರ್ಷ ಅವರನ್ನು ಹೊರತುಪಡಿಸಿ ಅವರಿಗಿಂತ ಕೆಳಹಂತದಲ್ಲಿರುವ ಉದ್ಯೋಗಿಗಳಿಗೆ ಮಾತ್ರ ವೇತನ ಏರಿಕೆ ಮಾಡಲಾಗಿದೆ.
SHOCKING NEWS: ಮೊಬೈಲ್ ಫೋನ್ನಲ್ಲೇ ಎಕ್ಸ್ ರೇ ಫೋಟೋ ಕ್ಲಿಕ್ಕಿಸಿಕೊಟ್ಟ ಆಸ್ಪತ್ರೆ ಸಿಬ್ಬಂದಿ! ಕಾರಣ ಏನು ಗೊತ್ತಾ?
BIGG NEWS : ಮೈಸೂರಿನಲ್ಲಿ ಇಂದು ಬೆಳಗ್ಗೆ 10 ಗಂಟೆಗೆ `ಮಹಿಷಾ ದಸರಾ’ ಆಚರಣೆ!
BIG NEWS: ಚೀನಾದಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿ, ಗೃಹಬಂಧನದಲ್ಲಿ ಕ್ಸಿ ಜಿನ್ಪಿಂಗ್