ನವದೆಹಲಿ: ಬಿಹಾರ-ಬಂಗಾಳ ಗಡಿಯಲ್ಲಿ ಕಲ್ಲು ತೂರಾಟದಲ್ಲಿ ರಾಹುಲ್ ಗಾಂಧಿ ಅವರ ಕಾರಿನ ವಿಂಡ್ ಸ್ಕ್ರೀನ್ ಪುಡಿಪುಡಿಯಾಗಿದೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಬುಧವಾರ ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಪ್ರಸ್ತುತ ಬಿಹಾರ ಪ್ರವಾಸದಲ್ಲಿದೆ.
“ಬಂಗಾಳ ಬಿಹಾರ ಗಡಿಯಲ್ಲಿ ರಾಹುಲ್ ಗಾಂಧಿ ಅವರ ಕಾರಿನ ಹಿಂಭಾಗದ ವಿಂಡ್ಸ್ಕ್ರೀನ್ ಒಡೆದಿದೆ. ಯಾರೋ ಕಲ್ಲು ತೂರಿರಬಹುದು” ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಂಗಳವಾರದಂದು ಕಟಿಹಾರ್ ತಲುಪಿದೆ. ಅವರು ಇಂದು ಬೆಳಿಗ್ಗೆ ಬಿಹಾರ ಜಿಲ್ಲೆಯಲ್ಲಿ ರೋಡ್ ಶೋ ನಡೆಸಿದರು. ಅವರು ಮಾಲ್ಡಾ ಮೂಲಕ ಪಶ್ಚಿಮ ಬಂಗಾಳವನ್ನು ತಲುಪುವ ನಿರೀಕ್ಷೆಯಿತ್ತು.
ಬಿಹಾರದ ಮಾಜಿ ಮಿತ್ರ ನಿತೀಶ್ ಕುಮಾರ್ ಅವರು ಬಿಜೆಪಿ ನೇತೃತ್ವದ ಎನ್ಡಿಎಗೆ ಮರಳಿದ ಬೆನ್ನಲ್ಲೇ, ಕಾಂಗ್ರೆಸ್ ಯಾತ್ರೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗಿಯಾಗಿದ್ದಂತ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಅವರ ಕಾರಿನ ಒಂದು ವಿಂಡೋಸ್ ಗ್ಲಾಸ್ ಪುಡಿ ಪುಡಿಯಾಗಿರೋದಾಗಿ ತಿಳಿದು ಬಂದಿದೆ.
ಮಂಗಳೂರಲ್ಲಿ ಫೆ.17 ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ : ಡಿಸಿಎಂ ಡಿಕೆ ಸ್ಪಷ್ಟನೆ