ಚಿಕ್ಕಬಳ್ಳಾಪುರ: ಬಿಜೆಪಿಗೆ ಮತ ನೀಡಿದರೆ ಉಚಿತ ಬಸ್ ನಿಲ್ಲಿಸುತ್ತಾರೆ ಅಂಥ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಅವರು ಮತದಾರರನ್ನು ಉದ್ದೇಶಿಸಿ ಮಾತನಾಡಿಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಕ್ಕಂದಿರೇ ಕೇಳಿಸಿಕೊಳ್ಳಿ. ನೀವು ಬಿಜೆಪಿಗೆ ಏನಾದರೂ ಓಟ್ ಹಾಕಿದರೆ ಅವರು ಗ್ಯಾರಂಟಿ ನಿಲ್ಲಿಸಿಬಿಡುತ್ತಾರೆ. ಮತ್ತೆ ಬಸ್ಸಿನಲ್ಲಿ ನೀವು ಟಿಕೆಟ್ ತಗೊಂಡು ಓಡಾಡಬೇಕಾಗುತ್ತದೆ. ಹಾಗಾಗಿ ಬಿಜೆಪಿಗೆ ಮತ ನೀಡಬೇಡಿ’ ಎಂದು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಗೆಲ್ಲಿಸಿದರೆ ಗ್ಯಾರಂಟಿ ಯೋಜನಗೆಳು ಸ್ಥಗಿತವಾಗಬಹುದು ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.