ಶಿವಮೊಗ್ಗ: ಕೆಪಿಟಿಸಿಎಲ್ ಇಂಜಿನಿಯರ್ ಶಾಂತಕುಮಾರ ಸ್ವಾಮಿ ಅವರು ಯಾರು ಅಂತನೇ ನನಗೆ ಗೊತ್ತಿಲ್ಲ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಆತ ಇಲ್ಲ. ಹೀಗಿದ್ದೂ ನನ್ನ ವಿರುದ್ಧ ಹಣ ಕೇಳಿದ ಆರೋಪ ಮಾಡಿದ್ದಾರೆ. ಇದನ್ನು ಸಾಬೀತು ಪಡಿಸಿದ್ದೇ ಆದರೇ ನಾನು ರಾಜೀಕೀಯ ನಿವೃತ್ತಿಯಾಗುವುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಸವಾಲ್ ಹಾಕಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಆತ ಎಂಎಲ್ಎ ಗೋಪಾಲಕೃಷ್ಣ ಬೇಳೂರು ಅಂತ ಹೇಳಿದ್ದಾರಾ? ಇಲ್ಲ ಕಾಂಗ್ರೆಸ್ ಶಾಸಕರು ಅಂದಿದ್ದಾರೆ. ನೋಡಿ ಅವರು ನನ್ನ ಕ್ಷೇತ್ರವರು ಅಲ್ಲ. ಕೆಪಿಟಿಸಿಎಲ್ ತಾಳಗುಪ್ಪದಲ್ಲಿ ಇರುವುದಂತೆ. ಅವರ ಮೇಲೆ ಹಲವಾರು ಕೇಸುಗಳು ಇರುವುದರಿಂದ ತಾನು ಬಚಾವಾಗೋದಕ್ಕೆ ಯಾರೋ ಮೇಲೆ ಒತ್ತಡ ಹೇರೋದಕ್ಕೆ ಹಾಗೆ ಮಾಡಿರಬಹುದು ಎಂದರು.
ನನಗೆ ಆತ ಪೋನು ಮಾಡಿಲ್ಲ. ನನಗೆ ಅವರು ಪರಿಚಯನೂ ಇಲ್ಲ. ನನಗೆ ಅವರು ಗೊತ್ತೂ ಇಲ್ಲ. ಸುಮ್ಮನೆ ಆಪಾದನೆ ಮಾಡಿದ್ದಾನೆ. ಕೇಸ್ ಆದ ನಂತ್ರ ಕೋರ್ಟಲ್ಲಿ ಏನಿದೆ ಎಂಬುದನ್ನು ನೋಡಿಕೊಂಡು ಕಾನೂನುನಿಡಿ ಕಾರ್ಯಪ್ರವೃತ್ತನಾಗುತ್ತೇನೆ. ನಾನು ಕೋರ್ಟ್ ನಲ್ಲಿ ಏನಾಗುತ್ತೋ ತಿಳಿದುಕೊಂಡು ಮುಂದಿನ ನಡೆಯನ್ನು ತೋರಲಿದ್ದೇನೆ ಎಂದು ಹೇಳಿದರು.
ನೀವು ಈಗಾಗಲೇ ಮಾನನಷ್ಟ ಮೊಕದ್ದಮ್ಮೆ ಹೂಡುವುದಾಗಿ ಹೇಳಿಕೆ ನೀಡಿದ್ದೀರಿ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದಂತ ಅವರು, ಕೋರ್ಟ್ ನಲ್ಲಿ ಏನಾಗುತ್ತೋ ನೋಡಿಕೊಂಡು ಮುಂದುವರೆಯುತ್ತೇನೆ. ನಮ್ಮ ವಕೀಲರೊಂದಿಗೆ ಆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ನಮ್ಮ ಕ್ಷೇತ್ರದವನಲ್ಲ. ಸೊರಬ ಕ್ಷೇತ್ರದ ತಾಳಗುಪ್ಪದವನು. ಆ ಹುಡುಗಿ ವಿಚಾರದಲ್ಲಿ ಪ್ರಕರಣವಿದೆ ಅದು ಸೊರಬ ಕ್ಷೇತ್ರ ವ್ಯಾಪ್ತಿಯದ್ದಾಗಿದೆ. ನನ್ನ ವಿರುದ್ಧ ಸುಮ್ಮನೇ ಆಪಾದನೆ ಮಾಡಿದ್ದಾನೆ ಅಥವಾ ಯಾರಾದರೂ ಬೇರೆಯವರು ಮಾಡಿರೋದಕ್ಕೆ ಶಾಸಕರು, ಶಾಸಕರ ಕಡೆಯವರು ಅಂದಿದ್ದಾನೋ ಗೊತ್ತಿಲ್ಲ. ನನಗೇನು ಆ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದರು.
ಇವತ್ತು ನಮ್ಮ ಡಿವೈಎಸ್ಪಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಅವನ ಮೇಲೆ ಏನು ಕೇಸಿದೆ. ಹುಡುಗಿ ಮನೆಗೆ ಹೋಗಿ ಗಾಂಜಾ ಬಿಸಾಕಿ ಸಿಕ್ಕಿಹಾಕಿಕೊಂಡಿದ್ದಾನೆ. ಇದೆಲ್ಲ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಅದೇನೋ ನನಗೆ ಗೊತ್ತಿಲ್ಲ. ಅದು ಜುಲೈ.22ರಂದು ಆಗಿರುವಂತ ಘಟನೆಯಾಗಿದೆ. ಜುಲೈ.22ರಲ್ಲಿ ನಾನು ಇರಲೇ ಇಲ್ಲ. ನಾನು ವಿದೇಶಿ ಪ್ರವಾಸದಲ್ಲಿದ್ದೆ. ಜುಲೈ.11ರಿಂದ 29ರವರೆಗೆ ವಿದೇಶಿ ಪ್ರವಾಸದಲ್ಲಿ ಇದ್ದುದ್ದರಿಂದ ಅವನು ಯಾರು? ಏನು ಅಂತನೂ ಗೊತ್ತಿಲ್ಲ. ಒಟ್ಟು ಶಾಸಕ ಅಂತ ಹೇಳಿದ್ದಾನಂತೆ ಎಂದು ಸ್ಪಷ್ಟ ಪಡಿಸಿದರು.
ನಾನು ಅವರೊಂದಿಗೆ ಮಾತನಾಡಿಲ್ಲ. ನನಗೆ ಆತ ಪೋನ್ ಕೂಡ ಮಾಡಿಲ್ಲ. ಶಾಸಕರು ಅಂದ್ರೆ ಸಾಗರ, ಸೊರಬ ಎರಡು ಕ್ಷೇತ್ರದವರು ಆಗುತ್ತಾರೆ. ಅವರು ಯಾರ ಬಗ್ಗೆ ಆರೋಪ ಮಾಡಿದ್ದಾರೋ ಗೊತ್ತಿಲ್ಲ. ಆತನ ಬಳಿಯಲ್ಲಿ ಏನಾದ್ರೂ ಸಾಕ್ಷಿ ಇದ್ದರೇ ತಂದು ಕೊಡಲಿ. ನನ್ನ ವಿರುದ್ಧದ ಆರೋಪ ಸಾಬೀತಾದ್ರೇ ನಾನು ರಾಜಕೀಯ ನಿವೃತ್ತಿಯನ್ನೇ ಆಗುತ್ತೇನೆ ಅಂತ ಸವಾಲ್ ಹಾಕಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
Paris Olympics 2024: ಅಧಿಕ ತೂಕದಿಂದಾಗಿ ವಿನೇಶ್ ಫೋಗಟ್ 50 ಕೆಜಿ ವಿಭಾಗದಿಂದ ಅನರ್ಹ
ಉದ್ಯೋಗ ವಾರ್ತೆ : ರೈಲ್ವೇ ಇಲಾಖೆಯಲ್ಲಿ 7,951 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ
BIG UPDATE : ಒಲಿಂಪಿಕ್ಸ್ ನಿಂದ `ವಿನೇಶ್ ಪೋಗಟ್’ ಅನರ್ಹ ಪ್ರಶ್ನಿಸಿ ಭಾರತದ ನಿಯೋಗದಿಂದ ದೂರು!