ತುಮಕೂರು : ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದು ಈಗಾಗಲೇ ಎರಡುವರೆ ವರ್ಷ ಪೂರ್ಣಗೊಳಿಸಿದೆ ಆದರೂ ಕೂಡ ಯಾವುದೇ ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸದೆ ಯಶಸ್ವಿಯಾಗಿ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರಿಗೆ ತಲುಪಿಸಲಾಗುತ್ತಿದೆ. ಇದೀಗ ಈ ಒಂದು ಗ್ಯಾರಂಟಿ ಯೋಜನೆಗಳ ಕುರಿತು ವಿಪಕ್ಷಗಳ ಟೀಕೆಗೆ ಜಿ. ಪರಮೇಶ್ವರ್ ರಸ್ತೆ ಚರಂಡಿ ನಿರ್ಮಾಣದಿಂದ ಜನ ಉದ್ಧಾರ ಆಗುತ್ತಾರ? ಹಾಗಾದರೆ ನಾಳೆಯಿಂದ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸೋಣ ಎಂದು ಟಾಂಗ್ ನೀಡಿದರು.
ತುಮಕೂರಿನ ಬಂಜಾರ ಸಮುದಾಯದ ಕಾರ್ಯಕ್ರಮದಲ್ಲಿ ಗ್ರಹ ಸಚಿವ ಜಿ ಪರಮೇಶ್ವರ್ ಮಾತನಾಡಿದ್ದು, ರಸ್ತೆ ಚರಂಡಿ ನಿರ್ಮಾಣದಿಂದ ಜನ ಉದ್ಧಾರ ಆಗುತ್ತಾರಾ ? ಗ್ಯಾರಂಟಿ ಯೋಜನೆಯ ಟೀಕೆ ಮಾಡುವವರಿಗೆ ನಾನು ಒಂದು ಪ್ರಶ್ನೆ ಕೇಳುತ್ತೇನೆ ಆಯ್ತು ಗ್ಯಾರಂಟಿ ಕೊಡಲ್ಲ ನಾಳೆಯಿಂದ ನಿಲ್ಲಿಸಿ ಬಿಡೋಣ 58,000 ಕೋಟಿ ಖರ್ಚಿನ ಗ್ಯಾರಂಟಿಯನ್ನು ನಿಲ್ಲಿಸುತ್ತೇವೆ . ಆದರೆ ರಸ್ತೆ ಮಾಡುವುದರಿಂದ ಚರಂಡಿ ಮಾಡುವುದರಿಂದ ಅಥವಾ ಇನ್ನೇನೋ ಮಾಡಿದರೆ ಜೀವನ ಉದ್ಧಾರ ಆಗುತ್ತಾ ಎಂದು ಪ್ರಶ್ನಿಸಿದರು.
ಹಾಗಂತ ನಾವು ರಸ್ತೆ ಮನೆಗಳನ್ನು ಕಟ್ಟುವುದನ್ನು ನಿಲ್ಲಿಸುತ್ತೇವೆ ಯಾವ ಕಾರ್ಯಕ್ರಮವನ್ನು ನಿಲ್ಲಿಸುವುದಿಲ್ಲ. ಬೇರೆ ಬೇರೆ ಕಾರ್ಯಕ್ರಮಗಳನ್ನು ನೀರಾವರಿ ಕಾರ್ಯಕ್ರಮಗಳು ನಿಲ್ಲಿಸುತ್ತಿರುವ ಯಾವುದೇ ಕಾರ್ಯಕ್ರಮಗಳನ್ನು ನಿಲ್ಲಿಸಿಲ್ಲ ಆದರೆ ಒಂದಿಷ್ಟು ನಿಧಾನ ಆಗಿರಬಹುದು ಒಪ್ಪಿಕೊಳ್ಳುತ್ತೇವೆ. ಆದರೆ ಬಹಳ ಮುಖ್ಯವಾದ ಮನುಷ್ಯನ ಜೀವನ ಸಾವಿರಾರು ವರ್ಷದ ಶೋಷಣೆ ಅದು ಮುಂದುವರಿಬಾರದು ಅನ್ನುವುದೇ ನಮ್ಮೆಲ್ಲರ ಉದ್ದೇಶ ಆಗಿದೆ ಹಾಗಾಗಿ ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ ಎಂದರು.








