ಬೆಳಗಾವಿ : ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ರಮೇಶ್ ಕತ್ತಿ ಅವರಿಗೆ ಟಿಕೆಟ್ ಮಿಸ್ ಆಗಿದ್ದು ಅಣ್ಣ ಸಾಹೇಬ ಜೊಲ್ಲೆಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿದೆ ಈ ಕುರಿತು ರಮೇಶ್ ಕತ್ತಿ ಬೇಸರ ವ್ಯಕ್ತಪಡಿಸಿದ್ದು, ಯಾಕೆ ಟಿಕೆಟ್ ಕೈತಪ್ಪಿದೆ ಎಂದು ನನಗೆ ಮಾಹಿತಿ ಇಲ್ಲ ಎಂದು ಅವರು ಬೇಸರ ಹೊರಹಕಿದ್ದಾರೆ.
ನರೇಂದ್ರ ಮೋದಿಯನ್ನು ‘ವೀಕ್ ಪಿಎಂ’ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆ ಹಾಸ್ಯಾಸ್ಪದವಾಗಿದೆ : ಸಿಟಿ ರವಿ
ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚಿಕ್ಕೋಡಿಯಿಂದ ಅಣ್ಣಾ ಸಾಹೇಬ ಜೊಲ್ಲೆಗೆ ಟಿಕೆಟ್ ನೀಡಿದ್ದಾರೆ.ಪಕ್ಷದ ಕಾರ್ಯಕರ್ತನಾಗಿ ಅವರ ಗೆಲುವಿಗೆ ನಾನು ಶ್ರಮಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೆ ನಾನು ಪಕ್ಷವನ್ನು ಬಿಡುವುದಿಲ್ಲ ಎಂದು ಬೆಳಗಾವಿಯಲ್ಲಿ ರಮೇಶ್ ಕತ್ತಿ ಸ್ಪಷ್ಟನೆ ನೀಡಿದರು.
‘ಜನ ಅಧಿಕಾರ್ ಪಕ್ಷ’ವನ್ನು ‘ಕಾಂಗ್ರೆಸ್ ಪಕ್ಷ’ದೊಂದಿಗೆ ವಿಲೀನಗೊಳಿಸಿದ ‘ಪಪ್ಪು ಯಾದವ್’ | Lok Sabha elections
ಬಹುಶಹ ಭಾರತೀಯ ಜನತಾ ಪಕ್ಷದ ಚಿಕ್ಕೋಡಿ ಲೋಕಸಭೆಯ ಅಭ್ಯರ್ಥಿಯಾಗಿ ನಾನು ಆಕಾಂಕ್ಷಿಯಾಗಿದ್ದೆ. ಆ ನಿಟ್ಟಿನಲ್ಲಿ ನಮ್ಮ ಹಿರಿಯರು ಮರದರ್ಶಕರಾಗಿರುವ ಬಿಎಸ್ ಯಡಿಯೂರಪ್ಪ ಹಾಗೂ ಬಿ ವೈ ವಿಜಯೇಂದ್ರ ಅವರು ತಮ್ಮದೇ ಆಗಿರುವಂತಹ ಸಾಕಷ್ಟು ಪ್ರಯತ್ನ ಮಾಡಿದರು ಸಹಿತ ಟಿಕೆಟ್ನಿಂದ ನಾನು ವಂಚಿತನಾಗಿದ್ದೇನೆ ಎಂದರು.
BREAKING : ‘ಪುಟಿನ್’ ಜೊತೆಗೆ ‘ಪ್ರಧಾನಿ ಮೋದಿ’ ದೂರವಾಣಿ ಸಂಭಾಷಣೆ, ‘ರಷ್ಯಾ ಅಧ್ಯಕ್ಷ’ರಿಗೆ ಅಭಿನಂದನೆ
ನಮ್ಮ ಪಕ್ಷದ ವರಿಷ್ಠರು ತೆಗೆದುಕೊಂಡಿರುವಂತಹ ನಿರ್ಣಯವನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಟಿಕೆಟ್ ಸಿಕ್ಕಿರುವಂತಹ ಜೊಲ್ಲೆ ಅವರಿಗೆ ಅಭಿನಂದಿಸುತ್ತೇನೆ. ಬರುವಂತಹ ದಿನಗಳಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ಚಿಕ್ಕೋಡಿಯಲ್ಲಿ ರಮೇಶ್ ಕತ್ತಿ ತಿಳಿಸಿದರು.