ಬೆಂಗಳೂರು : ದೇಶ ವಿಭಜನೆಯ ಕುರಿತು ಹೇಳಿಕೆ ನೀಡಿರುವ ಸಂಸದ ಡಿಕೆ ಸುರೇಶ್ ಅವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಆದೇಶ ತರಬೇಕೆಂದು ಬಿಜೆಪಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದರು ಇದೀಗ ಸಂಸದ ಡಿಕೆ ಸುರೇಶ್ ಶೀಘ್ರದಲ್ಲಿ ಈಶ್ವರಪ್ಪರನ್ನು ಭೇಟಿ ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಮಾಧ್ಯಮದ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಕರ್ನಾಟಕಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯದ ವಿಚಾರವಾಗಿ ನಾನು ಪ್ರತ್ಯೇಕ ದೇಶದ ಕೂಗು ಅನಿವಾರ್ಯತೆ ಎಂಬ ಹೇಳಿಕೆಗೆ ಈಗಲೂ ಬದಲಾಗಿದ್ದೇನೆ. ಈ ಹೇಳಿಕೆಗೆ ಕೆಎಸ್ ಈಶ್ವರಪ್ಪ ಅವರು ನನ್ನನ್ನು ಗುಂಡಿಕ್ಕಿ ಕೊಲ್ಲುವ ವಿಚಾರ ತಿಳಿಸಿದ್ದಾರೆ.
ಈಗಾಗಲೇ ಈಶ್ವರಪ್ಪ ಅಧಿಕಾರ ಕಳೆದುಕೊಂಡಿದ್ದಾರೆ.ಆದ್ದರಿಂದ ನಾನು ಶೀಘ್ರದಲ್ಲಿ ಅವರನ್ನು ಭೇಟಿ ಮಾಡುತ್ತೇನೆ. ಅವರು ನನಗೆ ಒಂದೆರಡು ಹೊಡೆಯುತ್ತಾರೋ ಅಥವಾ ಕೊಲ್ಲುತ್ತಾರೋ ಏನು ಬೇಕಾದರೂ ಮಾಡಲಿ ಅವರಿಗೆ ನನ್ನನ್ನು ಕೊಲ್ಲುವುದರಿಂದ ಅಧಿಕಾರ ಸಿಗುವುದಾದರೆ ಕೊಲ್ಲಲಿ ಎಂದು ತಿರುಗೇಟು ನೀಡಿದರು.